ಬಂದರೆ ಸಾಕು ವಾರದ ರಜೆ
ನನ್ನವಳು ಹೊರಟು ನಿಲ್ಲುತ್ತಾಳೆ
ಊರಿಗೆಂದು,
ಕೇಳಿದರೆ, ಯಾಕೆ ಹೋಗಬೇಕೆಂದು
ಸಬೂಬುಗಳು ವಾರಕ್ಕೊಂದರಂತೆ
ರಡಿಯಾಗಿರುತ್ತವೆ ಕೊಡಲೆಂದು..
ನೀ ಹೋಗಬೇಡ
ಇರೆ ಎಂದರೆ ಇಲ್ಲೇ,
ಇಲ್ಲೇನಿದೆ ಕಾಂಕ್ರೀಟ್ ನಾಡಿನಲ್ಲಿ
ಬರಿ ವಾಹನಗಳು, ಬಿಲ್ದಿಂಗಳು
ಹೋದರೆ ಹೋಗಬೇಕು ಶಾಪಿಂಗ್ಗೆ
ಇದ್ದಾರೆ ಇರಬೇಕು ಟಿ ವಿ ಮುಂದೆ
ಹೋಗದಿದ್ದರೆ ಊರಿಗೆ
ಗೊತ್ತಾಗುವುದಿಲ್ಲ ವಾರದ ರಜೆ
ಎಂದು ನನ್ನ ಮೇಲೆ ಮುಗಿಬಿಳುತ್ತಾಳೆ..
ಬರುತ್ತಿತ್ತು ವಾರದ ಕೊನೆಯಲ್ಲಿ ಎರಡು ರಜೆ
ಸೇರಿತು ಈ ಬಾರಿ ಅದಕ್ಕೆ ಮತ್ತೊಂದು
ಕಾರಣ ಭಾರತ್ ಬಂದ್ ದೆಂದು
ಹೋದವಳು ಹೋದಳು
ಆದರೆ ಮಾಡಲಿಲ್ಲ ಒಂದು ಫೋನು
ಕೇಳಿದರಿ ಯಾಕೆಂದು
ರೆಡಿಯಿರುತ್ತವೆ ಕಾರಣ ಕೊಡಲೆಂದು
ಆವಳಿಗೇನು ಗೊತ್ತು
ನನ್ನ ಬಿಟ್ಟು ಹೋದರೆ ದೂರ
ನೀರಿನಿಂದ ಹೊರ ಹಾಕಿದ
ಮೀನಿನ ಹಾಗೆ
ನಾನು ಎಷ್ಟು ಚದಪಡಿಸುತ್ತೆನೆಂದು..
ಇದನ್ನು ಅವಳಿಗೆ ಅರ್ಥಮಾಡಿಸಲಾಗದೆ
ಪರಿತಪಿಸುತ್ತಿದ್ದರೆ ಕೂತ ಕಡೆ ಕೂರಲಾಗದೆ..
ಆ ಕಡೆಯಿಂದ
ಬಿದ್ದಿತು ಒಂದು ಮೆಸೇಜು
ಇವತ್ತು ಸಾಯಂಕಾಲ ಬರುವುದನ್ನ
ನಾಳೆ ಮುಂಜಾವಿಗೆ ಬದಲಾಯಿಸಿದ್ದೇನೆ
ಕಾರಣ,ಬಸ್ಸುಗಳು ಇಲ್ಲಾ
ಇಂದು ಭಾರತ್ ಬಂದ್.....
ಪ್ರತಿಕ್ರಿಯೆ (1)