ಆತ್ಮೀಯ ಸಂಪದಿಗರೇ,

 ನಿಮ್ಮಲ್ಲಿ ಯಾರಾದರೂ "ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ" ವಿದ್ಯಾಭ್ಯಾಸ ಮುಗಿಸಿದ್ದೀರಾ? ನಿಮ್ಮ ಹಳೆಯ ಸಹಪಾಠಿಗಳನ್ನು, ಗುರುಗಳನ್ನು ಮತ್ತೆ ಭೇಟಿಯಾಗುವ ಹಂಬಲವಿದೆಯೇ? ಹಾಗಿದ್ದರೆ ನಿಮಗಿದೊಂದು ಸುವರ್ಣಾವಕಾಶ. ಈ ವರ್ಷದ ಅಂತ್ಯದಲ್ಲಿ ಅಥವ ಬರುವ ವರ್ಷದ ಪ್ರಾರಂಭದಲ್ಲಿ ’ಯು.ವಿ.ಸಿ.ಇ’ ಯ ಎಲ್ಲಾ ಹಳೆಯ ವಿದ್ಯಾರ್ಥಿಗಳು, ಗುರುಗಳು ಮತ್ತು ಈಗಿನ ವಿದ್ಯಾರ್ಥಿಗಳನ್ನು ಸೇರಿಸುವ ಒಂದು ಬೃಹತ್ ಕಾರ್ಯಕ್ರಮ ಜರುಗಲಿದೆ. ಈಗಾಗಲೇ ಕೆಲಸಗಳು ಭರದಿಂದ ಸಾಗಿದ್ದು ಹಳೆಯ ವಿದ್ಯಾರ್ಥಿಗಳ ಸಂಘದಿಂದ ’ಸಂಪದ’ ಎಂಬ ಮಾಸಪತ್ರಿಕೆಯನ್ನೂ ಆರು ತಿಂಗಳಿಂದ ಹೊರತರಲಾಗುತ್ತಿದೆ.ಈ ಕಾರ್ಯಕ್ರಮಕ್ಕೆ ನೀವೆಲ್ಲರೂ ಕೈಜೋಡಿಸಿ ಕಾರ್ಯಕ್ರಮ ಯಶಸ್ವಿಯಾಗಲು ನೀವು ಮಾಡಬೇಕಾದ್ದು ಇಷ್ಟೇ.ಈ ವಿಷಯವನ್ನು ನಿಮಗೆ ಗೊತ್ತಿರುವ ಎಲ್ಲರಿಗೂ ತಿಳಿಸಿ.

 ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಜಾಲತಾಣವನ್ನು ಸಂಪರ್ಕಿಸಿ:

 http://www.visionuvce.in