ಬೆಟ್ಟದಷ್ಟು ದುಃಖವನ್ನು ಎಳ್ಳಿನಷ್ಟು ನಗುವಿನಿಂದ ಬರಮಾಡಿಕೊಂಡರೆ ನಾವು ಸಾಮಕಾಶವಾಗಿ ಬದುಕಲು ಸಾಧ್ಯವಾಗುತ್ತದೆ. ದುಃಖವನ್ನು ಮಡಿಲಲ್ಲಿ ಸುತ್ತಿಕೊಂಡು ತೀರ್ಥಯಾತ್ರೆ ಹೋದರೇನು ಗುಡಿಗೋಪುರಗಳ ಸುತ್ತಿದರೇನು. ಒಂದು ಸಣ್ಣ ನಗುವಿನಿಂದ ನಮ್ಮ ಜೀವನವನ್ನೆ ಸರಿದೂಗಿಸಬಹುದು. ಜೀವನದಲ್ಲಿ ಕಷ್ಟಗಳು ಬರುವುದು ಸರ್ವೆ ಸಾಮಾನ್ಯ. ಹಾಗೆಯೆ ಸುಖವು ಕೂಡ, ಎರಡನ್ನು ಸರಿ ಸಮನಾಗಿ ಪಾಲು ಮಾಡಿಕೊಂಡು. ನಮ್ಮ ದಿನ ನಿತ್ಯದ ಜೀವನದಲ್ಲಿ ಒಂದು ಸಣ್ಣ ನಗುವಿನೊಂದಿಗೆ ಬರಮಾಡಿಕೊಂಡರೆ ಸ್ವರ್ಗವನ್ನೆ ಭೂಮಿಗೆ ತಂದಂತೆ ಸಂಭ್ರಮಿಸಬಹುದು. ನಮ್ಮ ಕೋಪವನ್ನು ಆದಷ್ಟು ನಮ್ಮ ಹಿಡಿತದಲ್ಲಿಟ್ಟುಕೊಂಡು ನಗುನಗುತ್ತ ಜೀವಿಸೋಣ. 
                                                   

 

                                                                                                                                   ವಸಂತ್