ಈ ಆದೇಶ ನೋಡಿದ್ರಾ..

 

___LINK_OPEN_ title="ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ" href="http://www.prajavani.net/Content/Jul82010/national20100707193519.asp?section=updatenews" target="_blank"___ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯ - ಸುಪ್ರೀಂಕೋರ್ಟ್ ಆದೇಶ

ಈ ಮೇಲಿನ ಪ್ರಜಾವಾಣಿಯ ಕೊಂಡಿಯನ್ನು ಒಮ್ಮೆ ನೋಡಿ..

ಹಾಗಾದ್ರೆ ಈಗಾಗಲೇ ಶಿರಸ್ತ್ರಾಣ ಇರೋರು.. ?

ಅದರ ಮೇಲೆ ಇನ್ನೊಂದು.. ಶಿರಸ್ಸಿಗೆ ಇನ್ನೊಂದು ಸ್ವಲ್ಪ ತ್ರಾಣ ಕೊಡಿ..

 

ಪ್ರಜಾವಾಣಿಯ ವರದಿ ಹೇಳುತ್ತೆ..

"ಬೈಕ್ ಸವಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೋರ್ಟ್   ತಕ್ಷಣದಿಂದಲೇ ಜಾರಿಯಾಗುವಂತೆ ಈ ತೀರ್ಪು ನೀಡಿದೆ. "

ಅಂದರೆ ಬೈಕ್ ಜತೆ ಹೆಲ್ಮೆಟ್ ಮಾರಾಟ ಕಡ್ಡಾಯವಾದ್ರೆ ಸುರಕ್ಷತೆ ಸಿಕ್ಕಂತೆಯೇ?

ಅದನ್ನ ಸವಾರ ಧರಿಸೋದು ತಾನೇ ಮುಖ್ಯ..

 

ನನಗೆ ಇಲ್ಲಿ ಇನ್ಯಾರದ್ದೋ "ಗೋಲ್‌ಮಾಲ್‌" ಇದ್ಯಾ ಅಂತ ಅನುಮಾನ ಬಂತು ಅಂತ ಯೋಚನೆ ಮಾಡಿದ್ರೆ.. ಇದು ಸುಪ್ರೀಂಕೋರ್ಟ್ ಆದೇಶ. ಹಾಗಾದ್ರೆ ಇದು ನಾನು ಅನುಮಾನ ಪಡುವಂತದಲ್ಲ ಅಂತೀರೋ.. ಅಥವಾ ಸುಪ್ರೀಂಕೋರ್ಟ್ ಕೂಡ ಇನ್ಯಾವುದೋ ಹೆಲ್ಮೆಟ್ ಕಂಪನಿಯ ಆಮಿಷಕ್ಕೆ ಒಳಗಾಯ್ತೆ?..

 

ಏನಿದರ ಹಿಂದಿನ ರಹಸ್ಯ..?

 

ನಿಮ್ಮೊಲವಿನ,

ಸತ್ಯ.. :-)