ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ
ನಿನ್ನ ತುಟಿಗಳ ಹಿಂದಿನ ಮೌನದಲ್ಲಿ ಅವಿತಿರುವ
ಮಿಡಿತಗಳಿಗೆ ಸ್ಪಂದಿಸುವೆ ನಾನು ಎಂಬ ನಿನ್ನ ಹೆಮ್ಮೆ
ನನಗೆ ನೀ ಕೊಟ್ಟ ಹೊಸ ಜವಾಬ್ದಾರಿ
ಬರಿಯ ನಾಳೆಯ ಕನಸುಗಳಲ್ಲದೆ
ನನ್ನ ಇಂದಿನ ತೊಡಕುಗಳನ್ನು ಹೊರುವ ನೀನು
ಕೇವಲ ಗೆಳತಿಯಲ್ಲ, ಅದಕ್ಕಿಂತಲೂ ಹೆಚ್ಚು!
ನಿನಗಾಗಿ ಹೊಸ ಶಬ್ದದ ಹುಡುಕಾಟ ಇನ್ನೂ ಮುಗಿದಿಲ್ಲ.
ನೀನು ಕೆಲವೊಮ್ಮೆ ಏನನ್ನೂ ಹೇಳದಿರುವಾಗ
ನಿನ್ನ ಮೌನದಡಿಯಲಿ ಅಡಗಿರುವ
ಪ್ರೀತಿಯ ಮಿಡಿತಕ್ಕೆ ಕರಗಿ ಹೋಗುವ ನಾನು
ಒಮ್ಮೆ ಈ ಲೋಕವನ್ನೇ ಮರೆತು ಬಿಡುತ್ತೇನೆ
ಆದರೂ ಒಬ್ಬರಿಗೊಬ್ಬರು ಹೇಳಲಾರದ
ಮನಸ್ಸಿನ ಭಾವನೆಗಳು, ತೊಳಲಾಟಗಳಿಂದ
ಗೆಳತಿ, ಈಗೀಗ ನಿನ್ನ ಕಳೆದುಕೊಳ್ಳುವೆನೆಂಬ ಭಯ
ಆದರೂ ಮುಂದೂಡುತ್ತೇನೆ ಮನದ ಮಾತನ್ನು ಹೇಳಲು
ನಾಳೆ ಮನಸ್ಸಿನ ಕಟ್ಟೆಯನೊಡೆದು ಹೇಳಿ ಬಿಡುತ್ತೇನೆ
ಆದರೂ ಭಯ, ನಾಳೆ ಎನ್ನುವುದು ಎಂದಿಗೂ ಬರದಿದ್ದರೆ
ನನಗೆ ಮತ್ತು ನಿನಗೆ ಅರ್ಥವಾದೀತೇ
ಒಬ್ಬರನ್ನೊಬ್ಬರು ನಾವೆಷ್ಟು ಪ್ರೀತಿಸುತ್ತಿದ್ದೆವೆಂದು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (8)