ಸರಿಯಾಗಿ ಒಂದು ವರ್ಷದ ಹಿಂದೆ ಚಿತ್ರಕಲೆ, ಕಂಪ್ಯೂಟರ್ ಗ್ರಾಫಿಕ್ಸಿಗೆ ಸೂರೆ ಹೋಗಿ 'ಕಂಜ್ಯೂರರ್' ಎಂಬ ಹೆಸರಲ್ಲಿ ಡೀವಿಯೆಂಟ್ ಆರ್ಟ್ ತಾಣದಲ್ಲಿ ಖಾತೆಯೊಂದನ್ನು ತೆರೆದಿದ್ದೆ. ಆಗ ಪರಿಚಯವಾದವರು ಹಲವು ಚಿತ್ರಕಾರರು, ಕಲಾಕಾರರು, ಗ್ರಾಫಿಕ್ಸ್ ಪಂಡಿತರು. ನನ್ನ ಇದೆಲ್ಲದರ ತಿಳುವಳಿಕೆ ಎಷ್ಟರ ಮಟ್ಟಿಗೆ (ಕಳಪೆಯಾಗಿ) ಇರುವುದೆಂಬ ಪರಿಚಯ ಮಾಡಿಕೊಟ್ಟದ್ದು ಅದೇ ಸಮುದಾಯವೆ!
ಆಗೊಮ್ಮೆ ಮಲೇಶಿಯಾದ ಥಿನೇಶ್ವರಿ ಗೋವಿಂದಸಾಮಿ ಎಂಬುವರ ಪರಿಚಯವಾದಾಗ ಅವರ ಗ್ಯಾಲರಿ ನೋಡುತ್ತ ಹೊರಟಿದ್ದೆ. ಆಗ ಸಿಕ್ಕದ್ದು ಗಣೇಶನ ಈ ಗ್ರಾಫಿಕ್. ಎಷ್ಟು ಸುಂದರವಾದ ಗ್ರಾಫಿಕ್ ಇದು ಎನ್ನುವುದನ್ನು ಒಂದು ವರ್ಷ ಕಾಲ ನನ್ನ ಡೆಸ್ಕ್ ಟಾಪಿನ ವಾಲ್ ಪೇಪರ್ ಆಗಿ ಉಳಿದದ್ದು ಎಂಬುದರಿಂದ ಗ್ರಹಿಸಬಹುದು. :)
ಸ್ವತಃ ಚಿತ್ರಕಲೆಯಲ್ಲಿ ಆಸಕ್ತನಾದ ನಾನೂ ಕೂಡ ಹಲವು ರೀತಿಯಲ್ಲಿ ವಿಜ್ಞೇಶ್ವರನನ್ನು ಬಿಡಿಸಲು ಪ್ರಯತ್ನಿಸಿದ್ದೇನೆ, ಆದರೆ ಕಂಪ್ಯೂಟರಿನಲ್ಲಿ ಇಷ್ಟರಮಟ್ಟಿಗೆ ಬಿಡಿಸುವ ಕಲೆ ಬಹುಶಃ ಥಿನೇಶ್ವರಿಯಂತವರಿಗೆ ಮಾತ್ರ ಒಲಿದದ್ದೇನೊ :)
ವಾಲ್ ಪೇಪರ್ ಪ್ರೇಮಿಗಳಿಗೆ ಸುಲಭವಾಗುವಂತೆ ಇಲ್ಲಿಯೂ ಅದರ ಪ್ರತಿ ಲಗತ್ತಿಸಿರುವೆ, ಬೇಕಾದರೆ ಡೌನ್ಲೋಡ್ ಮಾಡಿಕೊಳ್ಳಿ
ಪ್ರತಿಕ್ರಿಯೆ (1)