ಚಿಗಳಿ (ಮಲೆನಾಡಿನ ನಮ್ಮ ಭಾಗದಲ್ಲಿನ ಹೆಸರು) ಅಥವಾ ಒಂದು ಜಾತಿಯ ಕೆಂಪು ಇರುವೆ ದಾಸವಾಳ, ಮಾವಿನ ಮರಗಳಲ್ಲಿನ ಎಲೆಗಳನ್ನೇ ಬಗ್ಗಿಸಿ ಕುಟೀರ ನರ್ಮಿಸಿಕೊಂಡು ಬದುಕುತ್ತವೆ. ಇವು ಕಚ್ಚಿ ಗಾಯದ ಮೇಲೆ ಹುಳಿಯಾದ ರಸ ಸಿಂಚನ ಮಾಡಿ ಉರಿಯುವಂತೆ ಮಾಡುತ್ತವೆ. ಇದರ ವೈಜ್ಞಾನಿಕ ಹೆಸರೇನೂ ಗೊತ್ತಿಲ್ಲ. ಇವುಗಳನ್ನು ನಮ್ಮಲ್ಲಿಯ ಕೆಲವರು ಹಿಡಿದು ಹಿಂಡಿ ಚಟ್ನಿ ಮಾಡಿ ತಿನ್ನುತ್ತಾರೆ. ಇದರ ಚೆಟ್ನಿ ತುಂಬಾ ರುಚಿಯಾಗಿರುವುದಾಗಿಯೂ ಹೇಳುತ್ತಾರೆ. ಇವುಗಳ ಚಲನ ವಲನಗಳನ್ನು ನೋಡುವ ಕುತೂ ಹಲದಿಂದ ತೆಗೆದ ಚಿತ್ರವನ್ನು ತಮ್ಮ ಮುಂದಿಟ್ಟಿದ್ದೇನೆ ಅಷ್ಟೆ. ಹೆಚ್ಚಿನ ವಿಷಯ ನನಗೇನೂ ಗೊತ್ತಿಲ್ಲ.

ಪ್ರತಿಕ್ರಿಯೆ (2)