ಹಾಡಗಡ್ಡೆ ಬಳ್ಳಿ, ಇದರ ಎಲೆ ಸ್ವಲ್ಪ ಉದ್ದವಾಗಿ ಬರೆದ ತ್ರಿಕೋನ ಆಕಾರದಲ್ಲಿದ್ದು, ಹಚ್ಚ ಹಸಿರು ಬಣ್ಣದ್ದಾಗಿರುತ್ತದೆ. ಎಲೆಯು ಚೂಪಾದ ತುದಿ

ಹಾಡಗಡ್ಡ ಹಣ್ಣಿನ ಗೊಂಚಲು

ಯನ್ನು ಹೊಂದಿರುತ್ತದೆ. ನಾವು ಚಿಕ್ಕವರಿದ್ದಾರ ಸಂಜೆ ಸಮಯದಲ್ಲಿ ಇ

ದರ ಎಲೆಗಳನ್ನೆಲ್ಲಾ ನೀರಿನಲ್ಲಿ ಕಿವುಚಿ ಸೋಸಿ ರಸವನ್ನು  ತೆಂಗಿನ ಚಿಪ್ಪುಗಳಲ್ಲಿ ಶೇಖರಿಸಿಟ್ಟು ಮರುದಿನ ನೋಡಿದಾಗ ಇದು ಹಚ್ಚ ಹಸುರಿನ ಇಡ್ಲಿಯಾಕಾರ ಪಡೆದುಕೊಳ್ಳುತ್ತಿದ್ದು. ಅವುಗಳನ್ನು ಕಣ್ಣಿಗೆ ತಂಪೆಂದು ಕಣ್ಣಿನಮೇಲೆ ಇಟ್ಟುಕೊಳ್ಳುವ ರೂಢಿ ಇತ್ತು. ಇದರ  ಕಾಯಿ/ಹಣ್ಣುಗ

ಹಾಡಗಡ್ಡೆ ಬಳ್ಳಿ ಎಲೆ

ಳನ್ನು ತಿಂದರೆ ಕುರುಗಳು ಏಳುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿ ಅವುಗಳನ್ನು ತಿನ್ನಿಸುತ್ತಿದ್ದರು. ತಿನ್ನಲು ಸ್ವಲ್ಪ ಕಷ್ಟವಾದ್ದರಿಂದ ಅವುಗಳನ್ನು ಜಗಿಯದೆ ಗುಳುಂ ಎಂದು ನುಂಗುತ್ತಿದ್ದೆವು. ಇದರ ಗುಣಾವಗುಣಗಳ ಬಗ್ಗೆ ನನಗೇನೂ ಅರಿವಿಲ್ಲ. ಆದರೂ ನಂಬಿಗೆಯ ಮೇಲೆ ತಿನ್ನುತ್ತಿದ್ದೆವು. ಅಷ್ಟೆ.