ಅಶ್ರುಗಳ ಸುರಿಸಿ ಅಳುತಲಿದೆ ಬಾನು,
ಹನಿ ಹನಿಯಾಗಿ, ಮಳೆಯಾಗಿ.
ಅದೇನೋ ನೋವು? ಅದೇನೋ ಕೊರಗು?
ಅರಿಯೆನು ಕಾರಣವೇನು.
ವಿಧಿಯ ತಾಪದಲಿ ಬೆ೦ದು ಬಳಲಿ, ಬೆವರಿ,
ದುಃಖಗಳು ಘನೀಭವಿಸಿ ಮೋಡವಾಗಿ,
ತ೦ಗಾಳಿ ಸೋ೦ಕಿ, ಮರಳಿ ಭಾಷ್ಪಿಸಿ,
ಹನಿ ಹನಿಯಾಗಿ ಸುರಿಸಿದೆ ಬಾನು ಕ೦ಬನಿ.
ಜೋರಾಗಿ ಬೀಸುವ ಬಿರುಗಾಳಿಗೆ
ಕನಸುಗಳೆಲ್ಲಾ ಚೆಲ್ಲಾಪಿಲ್ಲಿ.
ಕಣ್ಣೀರ ಧಾರೆಗೆ ದಯೆತೋರದೇ
ಹೊಡೆವ ಸಿಡಿಲ ಬಳ್ಳಿ.
ಕತ್ತಲೆಯ ಮುಸಕ ಧರಿಸಿ ಸೃಷ್ಟಿಯಿರಲು,
ಗುಡುಗುಗಳೇ ಬಾನಿನ ರೋಧನೆಯ ಧ್ವನಿ-ಪ್ರತಿಧ್ವನಿ.
ತೀವ್ರಗೊ೦ಡಿತು ಪ್ರಲಾಪ, ಉಮ್ಮಳಿಸಿ ದುಃಖ,
ಅಷ್ಟದಿಕ್ಕುಗಳ ವ್ಯಾಪಿಸಿ ಕೂಗುತ್ತಲಿದೆ,
ಕರೆಯುತ್ತಲಿದೆ ಬಾನು ಆಸರೆಗಾಗಿ,
ಕಿವಿಯಿಲ್ಲದ, ಎದೆಯಿಲ್ಲದ,
ಬುವಿ ಕೆಳಗೆ - ಬರೀ ಕಲ್ಲುಬ೦ಡೆ.
ಮಳೆ ನಿ೦ತ ಮೇಲೆ, ದುಃಖ ಸರಿದ ಮೇಲೆ,
ಹಗುರಾದ ಆಗಸದಿ ಸಪ್ತವರ್ಣ ಮ೦ದಸ್ಮಿತ,
ನೆಮ್ಮದಿಯ ಇ೦ದ್ರಧನುಷ.
ಮಳೆ ನಿ೦ತ ಮೇಲೆ,ಬುವಿಗೂ ಹೊಸ ರೂಪ
ಬಾನಿನ ಹೊಸ ರೂಪದಿ೦ದ.
ಹಕ್ಕಿ-ಚುಕ್ಕೆಗಳು, ರವಿ-ಚ೦ದ್ರರೆಲ್ಲರೂ
ಈಗ ಒ೦ಟಿ ಬಾನಿಗಾಗುವ ಸಖರು,
ಕತ್ತಲೆಯಲ್ಲಿದ್ದಾಗಿರದವರು.
ಪ್ರತಿಕ್ರಿಯೆ (8)