ಸಂತೆ ಬೀದಿಗೆ ನೀ ಬರುವ ಘಳಿಗೆ

ಕಾದು ತೆರೆದಿಹೆ ನಾನೊಂದು ಮಳಿಗೆ

ಬೊಗಸೆ ನೋಟಕೆ ಸೇರು ಮುತ್ತು

ನಾ ಮುತ್ತ ಮಾರುವ ವರ್ತಕ..!

 

ಒಂದು ಮುತ್ತಿಗೆ ನೂರು ಉಚಿತ

ಕೊಂಡರೆ ಖುಷಿ ಸಂತಸವು ಖಚಿತ

ಬಿಡದೆ ತುಂಬಿಹೆ ಪ್ರತಿ ಮುತ್ತಲ್ಲಿ ಮತ್ತು

ನಾ ನಶೆ ದುಖಾನಿನ ಮಾಲಕ...!

 

ಭವದ ಬಂಧವನೆಲ್ಲ ತೊರೆದು

ಭಾವ ಬಂಧನದಿ ಬಿಡದಂತೆ ಬೆಸೆದು

ಮುತ್ತ ಮತ್ತಿನಲಿ ನೀ ಮರೆತರೇ ಹೊತ್ತು

ನನ್ನ ಜೀವಿತವೆ ಸಾರ್ಥಕ..!