ಕೈ ಅಡುಗೆ !
ಮದುವೆಯ
ಮೊದಲ ವರುಷ.....!
ತುಂಬಾ ರುಚಿ
ನನ್ನಾಕೆಯ ಕೈ ಅಡುಗೆ
ಈಗೀಗ
ಅವಳು ಮಾಡಿದ್ದೆಲ್ಲವೂ
ತುಂಬಾನೇ...ರುಚಿ
ಏಕೆಂದರೆ
ನಾನು
ನನ್ನಾಕೆಯ ಕೈ ಅಡಿಗೆ.
ಸುಂದರಾಂಗಿಗೆ...
ಏ ಸುಂದರಾಂಗಿ
ನೀ ಎನ್ನ ...
ಅರ್ಧಾಂಗಿಯಾಗುವ
ಕನಸು ಕಂಡೆ !
ಆದರೆ
ನಿನ್ನ ಅರ್ಧ ಅಂಗಿಯನ್ನು
ನೋಡಿ
ಬೆವರಿನಿಂದ ತೊಯ್ದಿತ್ತು
ನನ್ನ ಪೂರ್ಣ ಅಂಗಿ !
ಕಾಡಿಗೆ
ಸೀತೆಯ ಮೋಹಕ
ಕಣ್ಸೆಳೆತದ ಕಾಡಿಗೆ
ಕಳಿಸಲಿಲ್ಲವೇ ರಾವಣನ
ಸಾವಿನ ಕಾಡಿಗೆ !
ಪ್ರತಿಕ್ರಿಯೆ (8)