ಸೇರಿಗೆ ಸವ್ವಾ ಸೇರು
ಟೈಗ್ರಿಸ್
ಪ್ರಕೃತಿಯ ಕರೆಗೆ ಓಗೊಟ್ಟು ಬೇರೆ ಎಲ್ಲಿಯೂ ಜಾಗ ಕಾಣದೇ ತ್ಯಾಂಪನ ಹೊಸ ಕಾಶ್ಮೀರಿ ಕಾರ್ಪೆಟ್ ನ ಸತ್ಯಾನಾಶ್ ಮಾಡಿದ್ದಳು.
ಅಯ್ಯಯ್ಯೋ ಎಂದು ಕೂಗಿಕೊಂಡ ತ್ಯಾಂಪಿಯ ಅಬ್ಬರಕ್ಕೆ ಕಾಲ್ಲೂರಾಮಿ ಸಾಂತ್ವನ ಹೇಗಿದೆ ನೋಡಿ
"ಅಲ್ಲ ಮಿ ಥಾಂಫ್ , ಅವಳು ಇಲ್ಲೆಲ್ಲೋ ತನ್ನ ಬಲಗೈಯಲ್ಲಿ ಕೆರೆದಿದ್ದಳೇ ಹೇಳಿ..?"
ಮಿ ಥಾಂಫ್ ತನ್ನ ಹೊಸದಾಗಿ ಬಣ್ಣ ಬಳಿದ ಗೋಡೆಯಲ್ಲಿ ಬಿದ್ದ ಗೀರುಗಳನ್ನು ತೋರಿಸಿದ,
ಅವಳು ಹಾಗೆ ಮಾಡಿದ್ದರೆ ಕೂಡಲೇ ನೀವು ಅವಳಿಗೆ ಬಾಥ್ ರೂಮ್ ತೋರಿಸಬೇಕಿತ್ತು,
ನೋಡಿ ನಿಮ್ಮ ದೇ ತಪ್ಪು...
"ಆಳವಾಗಿದೆ ಆದರೆ ಬಲಗೈಯಲ್ಲ ಮೇಡಮ್ ಎಡ ಗಾಲಲ್ಲಿ" ತಿದ್ದಿದ.
"ಹಾಗಾದರೆ ಅಷ್ಟೇ ಅಲ್ಲ ಮಿ ಥಾಂಫ್, ಅವಳಿಗೆ ಪಾಪ ನಂಬರ್ ಟೂ ಕೂಡಾ ಬಂದಿರಬೇಕು
ಹಾಗಾದರೆ ಇಲ್ಲಿಯೇ ಎಲ್ಲಿಯೋ ಅವಳು ಅದನ್ನೂ ಮಾಡಿರಬೇಕು ಬಿಡಿ, ಅದೇ ನೋಡುತ್ತಿದ್ದೆ, ಇಷ್ಟರವರೆಗೂ ಅವಳು ಯಾಕೆ ಮಾಡಲಿಲ್ಲ ಅಂತ, ಯಾಕೆಂದರೆ
ಎರಡು ದಿನಗಳೀಂದ ಅವಳಿಗೆ ಹೊಟ್ಟೆ ಸರಿಯಿರಲಿಲ್ಲ , ನೋಡಿ, ಇನ್ನು ಸರಿಯಾದಾಳು ಪಾಪ!!! "
"ಓಹ್ ನಿಮ್ಮ ಕಾರ್ಪೆಟ್ ಕಲರೂ ಅವಳ ಲೂಶ್ ಮೋಷನ್ ಕಲರೂ ಸೇಮ್ ಟು ಸೇಂ" ಈ ಸಾರಿ ಉತ್ತರ ಬಂದಿದ್ದು
ಮುಷಾರಫ್ ನಿಂದ.
ಮಿ ಥಾಂಫ್ ನ ಗತಿ ಅವಳಿ ( ಟೈಗ್ರಿಸ್) ಗಿಂತಲೂ ಕಡೆ. ಇದನ್ನೆಲ್ಲಾ ತಾನೇ ಕ್ಲೀನ್ ಮಾಡಬೇಕಲ್ಲಾ ಎಂಬುದನ್ನು ಯೋಚಿಸಿಯೇ ಆತ ಗಡಗಡ ನಡುಗುತ್ತಿದ್ದ.
ಹೌದು ಎಲ್ಲಿದ್ದಾನೆ ಸೀನಣ್ಣ?
ತಡೆಯಲಾರದೇ ಕೇಳಿದ ತ್ಯಾಂಪ ತನ್ನ ಧರ್ಮದ ಪತ್ನಿಯನ್ನ.
ನಿಮ್ಮ ಬಾಸ್ ಹತ್ತಿರ ನಂಗೇನು ಮಾತು ಕಥೆ ಅಂತ ಹೊರಗೆಲ್ಲೋ ತಿರುಗಾಡಲು ಹೋಗಿದ್ದಾರೆ, ಅಲ್ಲದೇ ಬೇಕಾದ್ರೆ ಮಿಸ್ ಕಾಲ್ ಕೊಡು ಅಂತೂ ಹೇಳಿದ್ದಾರೆ" ಇದೇ ಬ್ಲಾಂಕ್ ಚೆಕ್ ತ್ಯಾಂಪನಿಗೆ!
ಕಲ್ಲೂರಾಮ್ "ಯಾರ ಬಗ್ಗೆ ಹೇಳ್ತಾ ಇದ್ದೀರಾ?"
ತ್ಯಾಂಪ "ಅದೇ ಸರ್, ನನ್ನ ಸಂಭಂಧಿ ಸೀನಣ್ಣ ನ ಬಗ್ಗೆ"
"ಕರೆಯಿರಿ ಎಲ್ಲಿದ್ದಾರೆ ಅವರು ?"
ತಾನು ಎಷ್ಟು ದೊಡ್ಡ ತಪ್ಪು ಮಾಡ್ತಾ ಇದ್ದೇನೆ ಅನ್ನುವ ಜ್ಞಾನವೇ ಇಲ್ಲದೇ ಹೇಳಿದ್ದ.
"ಆಯ್ತು ಬರ್ತಾರೆ ಬಿಡಿ" ಅಷ್ಟರಲ್ಲೇ ಕರೆಗಂಟೆ ಗುಣುಗುಣಿಸಿತು. ಲಗುಬಗೆಯಿಂದೆದ್ದ ತ್ಯಾಂಪ.
"ನಿಮ್ಮ ಮಕ್ಕಳು ಸ್ವಲ್ಪ ಜಾಸ್ತಿಯೇ ಆತಂಕಕಾರರು ಅನ್ನಿಸೋಲ್ವಾ ನಿಮಗೆ ಕೇಳಿದಳು ತ್ಯಾಂಪಿ ತಡೆಯಲಾರದೇ ಕಲ್ಲೂರಾಮಿಯನ್ನ.
ನೋ ನೋ ಮಿಸೆಸ್ ಥಾಂಫ್, ಮಕ್ಕಳು ಹೀಗಿದ್ದರೇನೇ ಚೆನ್ನ, ಅವರಲ್ಲದೇ ನಾವೂ ನೀವೂ ಹೀಗಿರೋಕಾಗುತ್ತಾ? ಹೇಳಿ"
ಅಷ್ಟರಲ್ಲೆ ಬಾಗಿಲ ದೂಡಿ ಒಳ ಬಂದವು ಇಬ್ಬರು ಮಕ್ಕಳು ಒಂದು ತೈಗ್ರಿಸ್ ನ ಬಾಲ ಎಳೆದರೆ ಇನ್ನೊಂದು ಮುಷರ್ಫ್ ನ ಕಾಲು ಎಳೆಯುತ್ತಿತ್ತು.
ಅವುಗಳೇ ಪಕ್ಕದ ಮನೆಯ ಮಿ ಲೋಷನ್ ನ ಮಕ್ಕಳು ಒಂದು ಸದ್ದಾಂ ಮತ್ತೊಂದು ಹಿಟ್ಲರ್.
ಸದ್ದಾಂ ತ್ಯಾಂಪನ ಆಫೀಸ್ ರೂಮಿಗೆ ನುಗ್ಗಿ ಒಂದು ಸ್ಟ್ಯಾಪ್ಲರ್ ತೆಗೆದುಕೊಂಡು ಬಂದು ಲಾಡೆನ್ ಗೆ ಅಣಕಿಸುತ್ತಿತ್ತು,
ನೋಡ ನೋಡುತ್ತಿದ್ದಂತೆ ಇಬ್ಬರಲ್ಲೂ ಮಾರಾ ಮಾರಿಯಾಯ್ತು,
ಇದರಲ್ಲಿ ಹೊಸದಾಗಿ ತಂದ ಪಿಂಗಾಣಿ ಚಹಾ ಸೆಟ್ ಸಾವಿರ ತುಂಡುಗಳಾದವು.
ಲಾಡೆನ್ ಆ ಗೆದ್ದ ನಗೆಯಲ್ಲೇ ತನ್ನ ಒಂದು ಕೈಯಲ್ಲಿ ಅದನ್ನ (ಸ್ಟ್ಯಾಪ್ಲರ್) ಹಿಡಿದು ಕಟಕ್ ಮಾಡಿತು ಎಲ್ಲರೂ ನೋಡ ನೋಡುತ್ತಿದ್ದಂತೆಯೇ ಪಳಕ್ ಅಂತ ಲಾಡೆನ್ ಎರಡೂ ಕಣ್ಣಲ್ಲೂ ನೀರು ಪಿನ್ ಒತ್ತಿದ್ದರಿಂದ ಎಡಗೈಯ್ಯಲ್ಲಿ ರಕ್ತ ಚಿಲ್ಲನೆ ಚಿಮ್ಮಿತು.
ಲಾಡೆನ್ ಬಾಯಿ ಎಂದರೆ ಅದು ಹೋಮ್ ಥಿಯೇಟರ್ ನ ೩೦೦೦ ಪಿ ಎಮ್ ಪಿ ಓ ಗದ್ದಲ.
ಅಷ್ಟರಲ್ಲೆ ಮುಷರಫ್ ನ ಗಲಾಟೆ ತಾರಕದಲ್ಲಿ
ಏನಾಯ್ತು ಎಂದರೆ ಸದ್ದಾಮ್ ಸ್ವಿಚ್ ಹಾಕಿದ ಇಸ್ತ್ರಿ ಪೆಟ್ಟಿಗೆಯನ್ನ ತಾನು ಇಸ್ತ್ರಿ ಮಾಡಲು ಹೋಗಿ ಕೈ ಸುಟ್ಟುಕೊಂಡಿತ್ತು.
ಕಲ್ಲೂರಾಮ್ ತನ್ನ ಕಲಿತ ವಿದ್ಯೆಯೆಲ್ಲವನ್ನು ಉಪಯೋಗಿಸಿದರೂ ಇವುಗಳ ಗದ್ದಲ ಕಡಿಮೆಯಾಗುವ ಲಕ್ಷಣ ಕಂಡು ಬರಲಿಲ್ಲ.
ಇಷ್ಟೇ ಆದರೆ ತೊಂದರೆಯಿರಲಿಲ್ಲ ಆಕಡೆಯಿಂದ ಕರುಣಾಜನಕ ಕೂಗು ಟೈಗ್ರಿಸ್ಳದ್ದು,
ಕೂಗಿನ ಜತೆಗೇ ನಾಗಲೋಟದಿಂದ ಓಡಿಬರುತ್ತಿರುವ ಅವಳು.( ಹಿಂದೆ ಸೀಮೆ ಎಣ್ಣೆ ಬಾಟ್ಲಿ ಕಯ್ಯಲ್ಲಿ ಹಿಡಿದಿದ್ದ ಸದ್ದಾಮ್)
ಮುಂದಿನ ಎರಡು ನಿಮಿಷದಲ್ಲಿ ಕಲ್ಲೂರಾಮ್ ಪರಿವಾರ ನೌ ದೋ ಗ್ಯಾರಹ ಮಾಡಿತ್ತು,
ಆದರೂ ಕೊನೆಗಳಿಗೆಯಲ್ಲೂ ತ್ಯಾಂಪಿ ಅವರಿಗಾಗಿ ಮಾಡಿದ್ದೆಲ್ಲವನ್ನೂ ಕಟ್ಟಿಕೊಂಡು ಹೋಗಲು ಮರೆಯಲಿಲ್ಲ.
"ಅಲ್ಲ, ಈ ಎರಡು ಮಕ್ಕಳು..? ನಿಮಗೆಲ್ಲಿ ಸೀನಣ್ಣ... ಸಿಕ್ಕಿದ್ದವು?" ತ್ಯಾಂಪಿ ಭಾರೀ ಖುಷಿಯಲ್ಲಿ ಕೇಳಿದಳು, ಸೀನನ್ನ.
ಎಂತ ಹೇಳೂದೆ, ಇಲ್ಲೇ ಒಂದ್ ಪಾರ್ಕ್ ಇತ್ತಲೆ ಅಲ್ಲೇ ಇದ್ದೆ, ಕಾಂತೆ ಒಂದ್ ಇನ್ನೋದನ್ನ ನೆಲಕ್ಕ ಹಾಕಿ ಕಾಲಲ್ಲ್ ಒತ್ತ್
ಕಂಡಿತ್, ಮತ್ತೊಂದ್ ಅಲ್ಲೆ ಕಲ್ ಅರ್ಸ್ತಾ ಇತ್, ಇದ್ರ ತಲಿ ಮೇಲ್ ಹಾಕೂಕೆ, ತಪ್ಸಂಡ್ ಕಾಂತೆ ಕೆಳ್ಗ್ ಬಿದ್ದೀತಲ್ಲೆ ಅದ್ ಪೋಲೀಸ್ನವ್ನ್ ಮಗ, ಇವೆರ್ಡೂ ಮಂಗ ನಮ್ಮ ಬದಿ ಮನಿ ರಾಜೀವಂದ್. ಬಪ್ದೊರ್ಳ್ಗ್ ಅವು ನಮ್ ಮನೀಗೆ ಹೊಗ್ದ್ವಲ್ಲೆ. ಎಂತಕೆ ಎಂತಾರು ತಲಿ ಬಿಸಿ ಮಾಡ್ದ್ವಾ ನಿಮ್ಗೆ ಈ ಶತ ಮರ್ಕಟಗ್ಳೂ?
(ಇಲ್ಲಮ್ಮಾ ನಾನು ವಾಪಾಸ್ಸು ಬರಬೇಕಂತ್ಲೇ ಇದ್ದೆ, ಸನಿಹದಲ್ಲೇ ಪಾರ್ಕ್ ಇದೆಯಲ್ಲ ಅದರಲ್ಲಿ ಒಬ್ಬ ಹುಡುಗನ್ನ ಸದ್ದಾಂ ನೆಲದಲ್ಲಿ ಮಲಗಿಸಿ ಒತ್ತಿ ಹಿಡಿದಿದೆ, ಹಿಟ್ಲರ್ ಪಕ್ಕದ ಕಲ್ಲು ಹೆಕ್ಕುತ್ತಾ ಇದೆ ಅದರ ತಲೆ ಮೇಲೆ ಹಾಕಲು.
ಕೆಳಗಿದ್ದವ ಪೋಲೀಸಿನವನ ಮಗ. ನಾನು ತಪ್ಪಿಸದಿದ್ದರೆ ಗೋವಿಂದ, ಆ ಮೇಲೆ ನೋಡುತ್ತೇನೆ ಅವು ನಮ್ಮ ಪಕ್ಕದ ಮನೆಯ ರಾಜೀವನ ಮಕ್ಕಳು.ನನ್ನ ಜತೆ ಬಂದ ಶತ ಮರ್ಕಟಗಳು ಕಲ್ಲೂರಾಮ ನ ಕಾರು ನೋಡಿ ಯಾರೋ ಬಂದಿದ್ದಾರೆ ತಿಂಡಿ ಸಿಗುತ್ತೆ ಅಂತ ಮನೆಯೊಳಕ್ಕೆ ನುಗ್ಗಿದವು, ಯಾಕೆ ಏನಾದರು ತೊಂದರೆ ಕೊಟ್ಟವಾ?ಈ ಶತ ಮರ್ಕಟಗಳು...?)
"ಇಲ್ಲ,ಇಲ್ಲ ತುಂಬಾ ಒಳ್ಳೆಯ ಕೆಲಸ ಮಾಡಿದಿರಿ ಬಿಡಿ"...ಎಂದಳು ತ್ಯಾಂಪಿ,
ತ್ಯಾಂಪನನ್ನು ಕಣ್ಣೀನಲ್ಲೇ ಬಸ್ಮ ಮಾಡುತ್ತಾ...
ಪಾಪ ಇವತ್ತು ರಾತ್ರೆ ತ್ಯಾಂಪ ಮತ್ತು ಕಲ್ಲುರಾಮ ರ ಗತಿ!.......................................................................... ದೇವರೇ ಗತಿ!!!!
ಗೋವಿಂದಾ... ಗೋವಿಂದ!!!!!!!!!!!!!
ತ್ಯಾಂಪನ ಬಾಸಾಯಣ 1
http://sampada.net/blog/gopinatha/10/07/2010/26734
ಪ್ರತಿಕ್ರಿಯೆ (3)