ಪ್ರತಿ ಮಳೆಗಾಲದಲ್ಲಿಯೂ ನನ್ನೂರಿಗೆ ಹೋದಾಗ ನಮ್ಮ ಕಾಫೀ ತೋಟಕ್ಕೆ ವಿಸಿಟ್ ಇದ್ದೇ ಇರುತ್ತೆ. ಹೀಗೆ ಹೋದಾಗೆಲ್ಲ ಅಲ್ಲಿಯ ಜೀವವೈವಿಧ್ಯಗಳು ನನ್ನ ಕಣ್ಣಿಗೆ ಹಬ್ಬದೂಟ ಉಣಬಡಿಸುತ್ತವೆ. ಜೋತೆಗೊಂದು ಕ್ಯಾಮೆರಾ ಇದ್ದಿದ್ರೆ ಎಷ್ಟು ಚೆಂದಿರ್ತಿತ್ತು ಎನ್ಕಂಡು ಯಾವಾಗ್ಲೂ ಬೇಸರವಾಗಿ ಕುಶಿಯಿಂದ ವಾಪಾಸಾಗ್ತಿದ್ದೆ.

 

ಕಳೆದ ವಾರ ಊರಿಗೆ ಹೋದಾಗ ಮಾತ್ರ ತೋಟಕ್ಕೆ ಹೋದವನು ಖುಶಿಯಿಂದ ಹಿಂದಿರುಗಿದ್ದೆ. ಕಾರಣ, ನಮ್ಮ ತೋಟದಲ್ಲಿ ಹಿಂದೆದೂ ಕಾಣದಿದ್ದ ಅತಿಥಿಯನ್ನ ಕಂಡು ಕ್ಯಾಮೆರಾದಲ್ಲೂ ಸೆರೆಹಿಡಿದೆ.

Image4

ಈ ಅತಿಥಿ ಜೇಡರ ಬಲೆಯಲ್ಲಿ ನೇತಾಡುತ್ತಿದ್ದುದನ್ನು ಕಂಡೊಡನೆ ಬೇಟೆಯನ್ನು ಕದ್ದು ತಿನ್ನಲು ಬಂದಿರುವ ಯಾವುದೋ ಕೀಟ ಎಂದುಕೊಂಡೆ. ಆದರೆ, ಹತ್ತಿರ ಹೋಗಿ ಪರೀಕ್ಷಿಸಿದಾಗಲೆ ಗೊತ್ತಾಗಿದ್ದು ಅದು ಒಂದು ಜೇಡ ಎಂದು.

Image2

 Image3

ಮುಳ್ಳಿಂದ ಕೂಡಿದ್ದ ಚಪ್ಪಟೆಯಾಕಾರದ ದೇಹ ಏಡಿಯ ದೇಹವನ್ನ ಹೋಲುತ್ತದೆ. ಹೊಟ್ಟೆಯ ಭಾಗ ಹಳದಿ, ಕಿತ್ತಳೆ, ಬಿಳಿ ಮತ್ತು ಕೆಂಪು ಬಣ್ಣಗಳಿಂದ ಕೂಡಿದ್ದು ನೋಡಲು ಬಹು ಆಕರ್ಷಕವಾಗಿದೆ.

Image5

 Image6

ನಾ ತೋಟವನ್ನು ಒಂದು ರೌಂಡ್ ಹೊಡೆದು ಮುಗಿಸುವಷ್ಟ್ರಲ್ಲಿ ಒಟ್ಟು ನಾಲ್ಕು ಕಡೆ ಇವು ಕಣ್ಣೆಗೆ ಬಿದ್ದವು. ಇವು ಕಾಡಿನಂತ ಜಾಗದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.

ಗೂಗಲಿಸಿದಾಗ ಸಿಕ್ಕಿದ್ದು ಈ ಹೆಸರು Spinybacked Orbweaver(Gasteracantha cancriformis).

'ಮುಳ್ಳುಬೆನ್ನಿನ ಜೇಡ' ಎನ್ನಬಹುದೆ?