ನಮ್ಮ ಊರಿನ ಪಕ್ಕದ ಊರಾದ ಬಂಜಗಾರು ರಾಮಣ್ಣ ಒಳ್ಳೆಯ ಕೃಷಿಕರು. ಅವರು ಅಸಾದ್ಯ ಪ್ರತಿಭಾವಂತರೂ ಹೌದು. ಮೊನ್ನೆ ಅವರ ಮನೆಗೆ ಹೋದಾಗ ಹಳೆ ಜನರ ನಿಯಮ ನಿಷ್ಠೆಗಳ ವಿಷಯ ಚರ್ಚೆಗೆ ಬಂತು. ಆವಾಗ ಹಳೆ ಜನರು ದೇವರಿಗೆ ನಮಸ್ಕಾರ ಮಾಡುತ್ತಿದ್ದ ನಮೂನೆಯನ್ನು ತೋರಿಸಿದರು. ಅದರ ಒಂದು ವಿಧಾನ ನಿಮಗಾಗಿ ಅಪ್ ಲೋಡ್ ಮಾಡಿದ್ದೇನೆ ವಿಡಿಯೋ ಸಮರ್ಪಕವಾಗಿ ಕಂಡರೆ ನೀವೂ ಹಾಗೆ ಕೈಮುಗಿಯಲು ಯತ್ನಿಸಿ. ಕಾಣಿಸದಿದ್ದರೆ ಸಾಕಪ್ಪಾ ಸಾಕು ನಿನ್ನ ಸಹವಾಸ ಎಂದು ನನಗೆ ಕೈ ಮುಗಿಯಬೇಡಿ.  ಆದರೆ ಅದನ್ನು ಇಲ್ಲಿ ಹಾಕಲಾಗಲಿಲ್ಲ. ದಯಮಾಡಿ ನನ್ನ ಬ್ಲಾಗ್ ಗೆ ಬನ್ನಿ. ಧನ್ಯವಾದಗಳು

http://shreeshum.blogspot.com