ಮಕ್ಕಳ ದೃಷ್ಟಿಯಲ್ಲಿ ಅಪ್ಪನೆಂದರೆ.....
ಸಂಪ್ರದಾಯದ ಜಾಡು ಹಿಡಿದು
ಹೊಸಬೆಳಕಿಗೆ ಮುಖವೊಡ್ಡದವ
ಅವರ ಇಚ್ಛೆಗೆ ವಿರುದ್ಧ ಚಿಂತಿಸಿ
ಮೀಸೆತೂರಿಸುವ ಜಿರಲೆ..!
ಆಗಾಗ ಹೊಸಬಟ್ಟೆ, ಬೈಕು ಕೊಡಿಸದ
ಜಿಪುಣ.....
ನಿನ್ನ ಗುರಿಸಾಧಿಸು ಕೊಡಿಸುವೆನೆಂದು
ಬೇಲಿ ಹಾಕುವ ನಿಪುಣ!
"ಉದ್ದಕೂದಲು ಬಿಡದೆ, ಎಣ್ಣೆ ಹಾಕಿ ಬಾಚಿಕೋ
ಮಾಡದಿರು ಅತಿಯಾದ ಫ್ಯಾಶನ್, ಕೆಟ್ಟವರ ದೋಸ್ತಿ
ನಿನ್ನತನವೇ ನಿನಗಿರುವ ಆಸ್ತಿ !"
ಎಂದು ಆಗಾಗ ಸುರುಳಿ ಸುತ್ತುವ ಟೇಪಿನಂತೆ !
ಆದರೆ.....
ಮಗನು ಅಪ್ಪನಾದಾಗ ಮಾಡುವುದು ಹೀಗೆಯೇ..!
ಅಪ್ಪನು ಅಪ್ಪನೇ..! ಮಗನು ಮಗನೇ..!
ಏಕೆಂದರೆ......
" ಕಾಲ ಕಾಯುವದಿಲ್ಲ ಉತ್ತರಿಸುತ್ತದೆ"
ಪ್ರತಿಕ್ರಿಯೆ (8)