
ಏಕೋ ತಿಳಿಯದು ಗೆಳತಿ ನಿನ್ನ ನೆನಪಾಗುತ್ತಿದೆ
ಮುಂಜಾವಿನ ಬಿಸಿಲ ಕೋಲಿನ ಹಾಗೆ ಬಾಳಲ್ಲಿ
ನೀನು ಬಂದು ಕತ್ತಲ ತುಂಬಿದ ಮನವ ಬೆಳಗಿದ
ನಿನ್ನ ನೆನಪು ಎಡೆಬಿಡದೆ ಇಂದೇಕೋ ಕಾಡುತ್ತಿದೆ!
ಬಾನ ಪಯಣವ ಮುಗಿಸಿದ ಸೂರ್ಯ ಪಡುವಣ
ಕಡಲಲ್ಲಿ ರಕ್ತ ಕಾರಿ ಸತ್ತುಹೋದದ್ದು ಅವನ ಕರ್ಮ
ಬಿಸಿಲ ಕೋಲು ಬೆಳ್ಳಿ ಕೋಲಾಗಿ ವಜ್ರ ಕೋಲಾಗಿ
ನನ್ನೆದೆಯನ್ನು ತಿವಿಯುತ್ತಿರುವುದು ಯಾವ ಧರ್ಮ?
ಕತ್ತಲಿನಲ್ಲಿ ನಾನಿದ್ದರೂ ನೀನು ಹರಿಸಿದ ಬಿಸಿಯಿದೆ
ಕಣ್ಣಿನೊಳಗೆ ನೀನು ತೋರಿಸಿದ ಬೆಳಕಿನ ಚಿತ್ರಗಳಿವೆ
ನಿನ್ನ ಸ್ಪರ್ಶದಲೆ ಬೆಚ್ಚನೆಯ ನೆಮ್ಮದಿ ಹರಿಯುತ್ತಿದೆ
ನಿನ್ನ ನೆನಪುಗಳ ಕಾವಿನಲ್ಲಿ ಬದುಕು ನಡೆಯುತ್ತಿದೆ
-----
ಡಾ|ನಾ.ಸೋಮೇಶ್ವರ
http://thundafunda.com/DESKTOPS/plog-content/images/theme-wallpaper/o25/sunlight_through_the_woods.jpg
ಪ್ರತಿಕ್ರಿಯೆ (4)