___LINK_OPEN_ href="http://4.bp.blogspot.com/_i-pjm8JvHHQ/TFfUqUyBqgI/AAAAAAAAAQk/BYnpYWm3xsc/s1600/504590585_90f3ea4f7d.jpg"___
ಹತ್ತಾರೂ ಬಾರಿಯಾದರೂ ನೋಡುತ್ತೇನೆ.
ಮೇಲೆ ಸಾಗುವ ಮೋಡಗಳ ಪಯಣವನ್ನು
ಸಾಗುತ್ತಾ ಸಾಗುತ್ತಾ ಮರೆಯಾಗುವ
ಅವುಗಳ ಪರಿಯ ಒಮ್ಮೆಯಾದರೂ
ನನ್ನ ಜೀವನಕ್ಕೆ ಅಳವಡಿಸಿಕೊಳ್ಳಲು
ಸಾಧ್ಯವಾಗುತ್ತದಾ ಎಂದು ತವಕಿಸುತ್ತೇನೆ.
ಅವುಗಳ ಸ್ವಚ್ಛಂದ ಸಾಗಾಟ
ಗಾಳಿಯೊಂದಿಗೆ ಅದರ ನಂಟು
ಸೂರ್ಯನ ತಾಪಕ್ಕೆ ಕರಗಿಹೋದರೂ
ನಾಳೆಯ ಬಗ್ಗೆ ಯೋಚಿಸದ ಪರಿಯನ್ನು
ತದೇಕ ಚಿತ್ತದಿಂದಲೇ ಗಮನಿಸುತ್ತೇನೆ.
ನನ್ನ ಜೀವನವು ಅವುಗಳಂತಾದರೆ ಸಾಕೆಂದು
ಪ್ರತಿ ರಾತ್ರಿಯು ಕನಸುಕಾಣುತ್ತೇನೆ
ದಿನನಿತ್ಯದ ಗೊಡವೆಗಳು
ಬೇಸರವನ್ನು ತರಿಸುವ ಪ್ರಸಂಗಗಳು
ನೋವಿನ ಛಾಯೆಗಳು
ವಿಷಾದದ ಬಿಂಬಗಳು
ಕೊನೆಯಾಗದ ಹೆಜ್ಜೆ ಗುರುತುಗಳು
ಮನಸ್ಸಿನಲ್ಲಿ ಮೂಡಿ ಕಸಿವಿಸಿ ಗೊಳಿಸುತ್ತವೆ.
ನನ್ನ ಸ್ವಚ್ಛಂದ ಆಸೆಗೂ ಅಡ್ಡಿಯುಂಟುಮಾಡುತ್ತವೆ
ಮುಂಜಾನೆಯೆ ಎದ್ದು ಆಕಾಶದೆಡೆಗೆ
ಮುಖಮಾಡಿ ದಿಟ್ಟಿಸಿ ನೋಡುತ್ತೇನೆ
ಬಿಸಿಯುಸಿರ ಭಾವವೊಂದು ಬಂದು ಕಣ್ಮರೆಯಾಗುತ್ತದೆ
ನನ್ನ ಸ್ವಚ್ಛಂದ ಜೀವನಕ್ಕೆ ರೆಕ್ಕೆ ಮೂಡುವುದು
ಕೇವಲ ಕನಸಿನಲ್ಲೆಂದು ತಿಳಿದು
ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆ.
ವಸಂತ್
ಹತ್ತಾರೂ ಬಾರಿಯಾದರೂ ನೋಡುತ್ತೇನೆ.
ಮೇಲೆ ಸಾಗುವ ಮೋಡಗಳ ಪಯಣವನ್ನು
ಸಾಗುತ್ತಾ ಸಾಗುತ್ತಾ ಮರೆಯಾಗುವ
ಅವುಗಳ ಪರಿಯ ಒಮ್ಮೆಯಾದರೂ
ನನ್ನ ಜೀವನಕ್ಕೆ ಅಳವಡಿಸಿಕೊಳ್ಳಲು
ಸಾಧ್ಯವಾಗುತ್ತದಾ ಎಂದು ತವಕಿಸುತ್ತೇನೆ.
ಅವುಗಳ ಸ್ವಚ್ಛಂದ ಸಾಗಾಟ
ಗಾಳಿಯೊಂದಿಗೆ ಅದರ ನಂಟು
ಸೂರ್ಯನ ತಾಪಕ್ಕೆ ಕರಗಿಹೋದರೂ
ನಾಳೆಯ ಬಗ್ಗೆ ಯೋಚಿಸದ ಪರಿಯನ್ನು
ತದೇಕ ಚಿತ್ತದಿಂದಲೇ ಗಮನಿಸುತ್ತೇನೆ.
ನನ್ನ ಜೀವನವು ಅವುಗಳಂತಾದರೆ ಸಾಕೆಂದು
ಪ್ರತಿ ರಾತ್ರಿಯು ಕನಸುಕಾಣುತ್ತೇನೆ
ದಿನನಿತ್ಯದ ಗೊಡವೆಗಳು
ಬೇಸರವನ್ನು ತರಿಸುವ ಪ್ರಸಂಗಗಳು
ನೋವಿನ ಛಾಯೆಗಳು
ವಿಷಾದದ ಬಿಂಬಗಳು
ಕೊನೆಯಾಗದ ಹೆಜ್ಜೆ ಗುರುತುಗಳು
ಮನಸ್ಸಿನಲ್ಲಿ ಮೂಡಿ ಕಸಿವಿಸಿ ಗೊಳಿಸುತ್ತವೆ.
ನನ್ನ ಸ್ವಚ್ಛಂದ ಆಸೆಗೂ ಅಡ್ಡಿಯುಂಟುಮಾಡುತ್ತವೆ
ಮುಂಜಾನೆಯೆ ಎದ್ದು ಆಕಾಶದೆಡೆಗೆ
ಮುಖಮಾಡಿ ದಿಟ್ಟಿಸಿ ನೋಡುತ್ತೇನೆ
ಬಿಸಿಯುಸಿರ ಭಾವವೊಂದು ಬಂದು ಕಣ್ಮರೆಯಾಗುತ್ತದೆ
ನನ್ನ ಸ್ವಚ್ಛಂದ ಜೀವನಕ್ಕೆ ರೆಕ್ಕೆ ಮೂಡುವುದು
ಕೇವಲ ಕನಸಿನಲ್ಲೆಂದು ತಿಳಿದು
ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆ.
ಪ್ರತಿಕ್ರಿಯೆ (4)