೧) ಮದುವೆಯ ಬಗ್ಗೆ ಒಂದು ವ್ಯಂಗ್ಯಾತ್ಮಕ ನಿಲುವು

  ಮದುವೆಗೆ ಮುಂಚೆ ಅವನೆಂದ ಅವಳಿಗೆ
  "ನೀ ಎನ್ನ ಅಂತರಂಗದ ಚಿಲುಮೆ"
  ಮದುವೆಯ ನಂತರ ಅಂದುಕೊಂಡ
  "ಯಾಕಾಯಿತು ನನ್ನೆದೆ ಉರಿಯುವ ಕುಲುಮೆ?!"

 ೨) ಬೆಂಗಳೂರಿನ ಫ್ಲೈ ಓವರ್ ಗಳ ಆಮೆಗತಿ ಕಾಮಗಾರಿ ಬಗ್ಗೆ ...

  ಎಲ್ಲಿ ನೋಡಿದರಲ್ಲಿ ಫ್ಲೈ ಓವರ್
  ಜನರಿಗೆಲ್ಲಾ ಹಾರರ್
  ಯಾವಾಗ ಎಲ್ಲಿ ರಸ್ತೆ
  ಜ್ಯಾಮ್ ಆಗತ್ತೊ ಹುಷಾರ್!!!

೩) ಆಗತಾನೆ ಪ್ರೀತಿಯಲ್ಲಿ ಹುಚ್ಚನಾಗಿರುವವನ ಪ್ರಲಾಪ

  ಮನಸೆಲ್ಲ ನೀನು ತುಂಬಿ
  ನಾನಾಗಿರುವೆನು ದುಂಬಿ
  ಮಾತಾಡದೆ ನಾನಾದೆನು ತಬ್ಬಿಬ್ಬಿ
  ನಿನ್ನ ಪ್ರೀತಿಯ ನಂಬಿ

೪) ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಗತಿ

  ಹೇಳುವರು ಕನ್ನಡಕ್ಕೆ
  ಸಿಗಬೇಕು ಮನ್ನಣೆ
  ಆದರೆ ಬೆಂಗಳೂರಾಗಿದೆ
  ಎಲ್ಲ ಭಾಷೆಗಳ ಒಗ್ಗರಣೆ!