(೧೮೬) ಬೇರೇನನ್ನೋ ಮರೆಯುವ ಸಲುವಾಗಿ ದೂರದರ್ಶನವನ್ನು ನೋಡುತ್ತೇವೆ. ಅದಕ್ಕೆ ಶಿಕ್ಷೆಯಾಗಿ ಬದುಕಿನ ಮೊಲಭೂತ ಅವಶ್ಯಕತೆಗಳನ್ನು ಮರೆಸುವಂತಹ ಕಾರ್ಯಕ್ರಮಗಳನ್ನು ದೂರದರ್ಶನವು ಪ್ರಸಾರ ಮಾಡುತ್ತದೆ!
(೧೮೭) ಅತ್ಯಂತ ನಿರಾತಂಕಿತವಾಗಿ ಬದುಕನ್ನು ಸಾಗಿಸುವುದರ ಪರಿಣಾಮವೆಂದರೆ ಆತಂಕಪೂರಿತ ದುಃಖದುಮ್ಮಾನಗಳು ಕಟ್ಟಿಟ್ಟ ಬುತ್ತಿಯಂತೆ ಭವಿಷ್ಯದಿಂದ ನಮ್ಮೆಡೆಗೆ ಧುತ್ತನೆ ಪ್ರತ್ಯಕ್ಷವಾಗುತ್ತಿರುತ್ತವೆ!
(೧೮೮) ಕಾಯುವುದನ್ನು ಕಲಿಯಲಿರುವ ಒಂದೇ ಉಪಾಯವೆಂದರೆ ಕಾಯುವುದೇ ಆಗಿದೆ!
(೧೮೯) ತಿರುವುಮರೆವಾಗಿ ತೊಡಲ್ಪಟ್ಟ ಮುಖವಾಡವನ್ನು ಗಡ್ಡವೆನ್ನಬಹುದು!
(೧೯೦) ವೈರುಧ್ಯಮಯ ವಿಷಯವೇನೆಂದರೆ ನಿಜವಾದ ಪಾಠವು ಪ್ರವಚನವನ್ನು ವಿರೋಧಿಸುತ್ತದೆ. ವೈಪರೀತ್ಯವೆಂದರೆ ಕೆಟ್ಟ ಕಲಿಕೆಯು ಅದನ್ನೇ ವಿರೋಧಿಸುತ್ತದೆ!
ಪ್ರತಿಕ್ರಿಯೆ (1)