(೧೯೧) ದೇವರು ನಮಗೆ ಆತನನ್ನು ನಂಬದೆ ಇರಲು ಅನುಮತಿ ನೀಡಿರುವುದು ಏಕೆಂದರೆ ಆತನ ರಾಜ್ಯದಲ್ಲಿ ಮೊರ್ಖರನ್ನು ಹೊಂದಿರುವ ಅರ್ಹತೆ ಆತನಿಗಿಲ್ಲ.

(೧೯೨) ದೇವರಿಗೂ ನಾವು ಮೋಸ ಬಗೆಯದಿರಲಾರೆವು. ಸದಾ ಆತನನ್ನು ಧ್ಯಾನಿಸುವುದೇಕೆಂದರೆ ಆತನ ಮುಖಾಂತರ ಸ್ವರ್ಗ ತಲುಪಬಹುದೆಂಬ ಆಸೆಯಿಂದ!

(೧೯೩) ಉಸಿರಾಟವು ಕೇವಲ ತನ್ನ ಅನುಪಸ್ಥಿತಿಯಿಂದ ವ್ಯಕ್ತಿಯನ್ನು ಕೊಂದುಬಿಡಬಹುದು. ಒಬ್ಬ ಕೆಟ್ಟ ಉಪಾಧ್ಯಾಯ ಕೇವಲ ತನ್ನ ಉಪಸ್ಥಿತಿಯಿಂದಲೇ ಒಂದಿಡೀ ತಲೆಮಾರನ್ನು ಕೊಂದುಬಿಡಬಲ್ಲ!

(೧೯೪) ಸೃಷ್ಟಿಯ ಅದ್ಭುತವೆಂದರೆ ಅದ್ಭುತ ವಿಷಯಗಳ ಬಗ್ಗೆ ಆಶ್ಚರ್ಯಪಡಬಲ್ಲ ಮನುಷ್ಯನ ಸಾಮರ್ಥ್ಯ. ಪ್ರತಿಯೊಂದು ವಿಷಯದ ಬಗ್ಗೆಯೊ ಆಶ್ಚರ್ಯಪಡಲು ಪ್ರಾರಂಭಿಸಿಬಿಟ್ಟರೆ ಎಲ್ಲವೂ ಸಹಜವೆನ್ನಿಸಿಬಿಡುತ್ತದೆ. ಈ ನಿಟ್ಟಿನಲ್ಲಿ ಬಹುಪಾಲು ಜನ ಅಸಹಜರು!

(೧೯೫) ಸಮಸ್ಯೆಯೊಂದಕ್ಕೆ ನಮ್ಮಲ್ಲಿ ಪರಿಹಾರವಿಲ್ಲದಿದ್ದರೆ ಅದು ತುರ್ತುಸ್ಥಿತಿಯಾಗುತ್ತದೆ. ಮತ್ತೆ ಯೋಚಿಸಿ ಹೇಳಬಹುದಾದರೆ, ತುರ್ತುಸ್ಥಿತಿಯೊಂದಕ್ಕೆ ನಿಮ್ಮಲ್ಲಿ ಪರಿಹಾರವಿದೆ ಎಂದಾದರೆ ನೀವು ನೆರೆ ಸಂತ್ರಸ್ಥರಿಗೆ ಚಂದಾ ಎತ್ತುತ್ತಿದ್ದೀರಿ ಎಂದರ್ಥ.