(ಪಂಚರಂಗಿಯ ಭರ್ಜರಿ ಯಶಸ್ವಿ ಜನಪದ ಗೀತೆ ‘ಲೈಫು ಇಷ್ಟೇನೇ’ ಸ್ಪೂರ್ತಿಯಲ್ಲಿ ಸಾಮ್ರಾಟರು ದಿನವೂ ಗಂಡಂದಿರ ಅಂತರಂಗದ ಗ್ರಾಮಾಫೋನಿನಲ್ಲಿ ನುಡಿಯುವ ಭಾವವನ್ನು ಎತ್ತಿಕೊಂಡು ಹಾಡು ಕಟ್ಟಿದ್ದಾರೆ. ಭವಿಗಳು, ಅನುಭವಿಗಳು ಹೆಚ್ಚು ಸಾಲುಗಳನ್ನು ಸೇರಿಸಬಹುದು)

 

ನಮ್ಮ ಅನುಭವಜನ್ಯ ಸಾಲುಗಳನ್ನು ನಗಾರಿ ಸಾಮ್ರಾಜ್ಯದ ಅನೇಕ ಆಸಕ್ತ ಪ್ರಜೆಗಳು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದಾರೆ. ರಮಾನುಜಂ.ಎಂ.ಕೆ ಎನ್ನುವ ಮಿತ್ರರು ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡನ್ನೂ ತಯಾರು ಮಾಡಿದ್ದಾರೆ. ಇನ್ನು ಮುಂದೆ ಈ ಹಾಡು ಗಂಡಂದಿರ ರಿಂಗ್ ಟೋನ್ ಆಗಿ ಹೋದರೆ ನಾವು ಜವಾಬ್ದಾರರಲ್ಲ ಎಂದು ಈಗಲೇ ಹೆಮ್ಮಕ್ಕಳಿಗೆ ಸ್ಪಷ್ಟಪಡಿಸುತ್ತಿದ್ದೇವೆ.

 

ಹಾಡಿಗಾಗಿ ಇಲ್ಲಿ ಎಡತಾಕಿ: http://soundcloud.com/ramanu/lifuwifuishtene 

ಲವ್ವು ಗಿವ್ವು ಮಾಡಿ ಕಟ್ಕೋ
ಅಮ್ಮ ತೋರ್ಸಿದ್ ಹೆಣ್ಣೇ ಒಪ್ಕೋ
ಫಾರಿನಲ್ಲೇ ಮದ್ವೆ ಮಾಡ್ಕೋ
ವೈಫು ಇಷ್ಟೇನೇ!

ಕುಳ್ಳಗಿದ್ರೂ ಅಡ್ಜಸ್ಟ್ ಮಾಡ್ಕೋ
ದಪ್ಪ ಹೊಟ್ಟೇನ್ ಇಗ್ನೋರ್ ಮಾಡು
ಉಬ್ಬು ಹಲ್ಲನು ನೋಡಲೇ ಬೇಡ
ವೈಫು ಇಷ್ಟೇನೇ

ಗಂಡ ನೀನು ಡ್ರೈವರ್ ಆಗು
ಅಡುಗೆ ಮಾಡಿ ಇಸ್ತ್ರೀ ಹಾಕು
ಮುಸುರೆ ತೊಳೆದು ಕೆಲ್ಸಕ್ ಹೋಗು
ವೈಫು ಇಷ್ಟೇನೆ

ಅಮ್ಮ ಬೇರೆ ಮನೆಯ ಮಾಡ್ಲಿ
ಇಂಗ್ಲೀಷ್ ಕಲಿತ ಆಯಾ ಬರ್ಲಿ
ಕೆಲಸದ ಹೆಣ್ಣು ಹೇಗೆ ಇರ್ಲಿ
ವೈಫು ಇಷ್ಟೇನೇ

ಪ್ರೀತಿ ಪ್ರೇಮ ಎಲ್ಲಾ ಮರ್ತು
ವರ್ಷಕ್ಕೊಮ್ಮೆ ಕಾಲು ತೊಳೆದು
ತಾಳಿ ದೇವರು ಆಗಿ ಹೋಯ್ತು
ವೈಫು ಇಷ್ಟೇನೇ

ಸಿಗರೇಟ್ ಮನೆಯ ಹೊರಗೆ ಸೇದು
ಮಕ್ಕಳ ಸ್ಕೂಲು ಫೀಸು ತುಂಬು
ಜೊತೇಲಿ ಕೂತು ಸೀರಿಯಲ್ ನೋಡು
ವೈಫು ಇಷ್ಟೇನೆ

ಅತ್ತೆ ಮಾವ ದೇವರು ಅನ್ನು
ತವರಿಗೆ ಕಳಿಸಿ ಪಾರ್ಟಿ ಮಾಡು
ನೆನೆಪು ಮಾಡ್ಕಂಡು ಫೋನು ಮಾಡು
ವೈಫು ಇಷ್ಟೇನೇ

ಶರ್ಟಿನ ಒಳಗೆ ಹೊಟ್ಟೆ ಎಳ್ಕೋ
ಪಕ್ದಲ್ ನಿಂತು ಫೋಟೊ ತೆಗೆಸ್ಕೋ
ಮಗಳ ಫ್ರೆಂಡು ಅಂಕಲ್ ಅನ್ನಲಿ
ವೈಫು ಇಷ್ಟೇನೇ

ಮದ್ವೆ ಮೊದ್ಲು ಸೀರೆ ಕೊಡ್ಸು
ಮದ್ವೆ ಆದ್ಮೇಲ್ ಒಡವೆ ತೊಡ್ಸು
ದಿನವೂ ಮಲ್ಲಿಗೆ ಹೂನ ಮುಡ್ಸು
ವೈಫು ಇಷ್ಟೇನೇ

ಗಂಡ ಹೆಂಡತಿ ಸಿನೆಮಾಗೆ ಹೋಗ್ರಿ
ಒಂದೇ ಗ್ಲಾಸಲ್ಲಿ ಜ್ಯೂಸು ಕುಡೀರಿ
ಮೊದಲ ಮಗನಿಗೆ ಹೆಸ್ರು ಇಡ್ರಿ
ವೈಫು ಇಷ್ಟೇನೇ

ದಿನವೂ ತಪ್ಪದೆ ಆಫೀಸ್ಗೋಗು
ರಾತ್ರೀ ವರ್ಗೂ ಕೆಲಸ ಇಟ್ಕೋ
ಸಂಡೇ ಕೂಡ ಓಟಿ ಮಾಡು
ವೈಫು ಇಷ್ಟೇನೇ

ಬೆಳ್ಳಿ ವಜ್ರ ಎಲ್ಲಾ ಕೊಡ್ಸು
ಅವ್ಳ ಹೆಸರಲ್ಲಿ ಬಂಗ್ಲೆ ಕಟ್ಸು
ತಾಜ್ ಮಹಲಿಗೆ ಪಾಯ ಹಾಕು
ವೈಫು ಇಷ್ಟೇನೇ

ಹೆಂಡತಿ ಹೆಸರು ಹಿಟ್ಲರ್ ಆಗಿ
ಹೆಂಡತಿ ಆನೇ ಸೈಜೇ ಆಗ್ಲಿ
ತಿಂಗಳ ಕೊನೇಲಿ ಪಾಪರ್ ಆಗು
ವೈಫು ಇಷ್ಟೇನೇ….
ವೈಫು ಇಷ್ಟೇನೇ…