(೧೯೬) ಜಗತ್ತಿನ ಬಗ್ಗೆ ನಮಗೆ ಯಾವುದಾದರೂ ಸಮಸ್ಯೆ ಕಂಡುಬಂದಿತೆಂದರೆ ಆಗ ಜಗತ್ತು ನಮ್ಮ ತಪ್ಪುಗಳನ್ನು ನಿರಂತರವಾಗಿ ಗಮನಿಸುವುದನ್ನು ಬದಿಗಿರಿಸಿ ವಿಶ್ರಮಿಸುತ್ತಿದೆ ಎಂದರ್ಥ!
(೧೯೭) ದೂರವಾಣಿ ಸಂಖ್ಯೆಗಳನ್ನು ಪರಸ್ಪರ ಬದಲಿಸಿಕೊಳ್ಳುವುದೆಂದರೆ, ಜನರು ಪರಸ್ಪರ ಪರಿಚಯಿಸಿಕೊಳ್ಳುವುದು ಎಂದರ್ಥ. ಆದರೆ ಜನರು ಪರಸ್ಪರ ಪರಿಚಯಿಸಿಕೊಳ್ಳುವುದೆಂದರೆ ಮುಖಾಮುಖಿಯಾಗುವುದು ಎಂದೇ ಅರ್ಥ!
(೧೯೮) ಮೇಧಾವಿ ಮತ್ತು ಹುಚ್ಚರಿಬ್ಬರ ನಡುವೆ ಇರಬಹುದಾದ ಒಂದೇ ವ್ಯತ್ಯಾಸವೆಂದರೆ ಸ್ವಾಭಾವಿಕ ಪ್ರಜ್ಞೆ. ಮತ್ತೊಂದು ಒಂದೇ ವ್ಯತ್ಯಾಸವೆಂದರೆ ಅದು ಮಾನವೀಯತೆ!
(೧೯೯) ದೈವಸೃಷ್ಟಿಗಿಂತಲೂ ಮಾನವಸೃಷ್ಟಿ ಮಿಗಿಲು. ಏಕೆಂದರೆ ಮನುಷ್ಯ ಅನಂತ ಮತ್ತು ಅಸಾಧ್ಯವಾದ ದೇವರನ್ನೇ ಸೃಷ್ಟಿಸಿದ. ಆದರೆ ದೇವರು ಮನುಷ್ಯನೆಂಬ ಒಬ್ಬ ಚಾರಿತ್ರ್ಯಹೀನ, ಪಾಖಂಡಿ, ಸ್ವಾರ್ಥಜೀವಿಯನ್ನು ಸೃಷ್ಟಿಸಿಬಿಟ್ಟ!
(೨೦೦) ಯಾವುದೇ ತೆರನಾದ ಪ್ರಶ್ನೆಗಿರುವ ಏಕೈಕ ಅರ್ಥಪೂರ್ಣ ಪರಿಹಾರವೆಂದರೆ ಆ ಪ್ರಶ್ನೆಯನ್ನೇ ಕೇಳದಿರುವುದು!
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!