(೨೦೧)ಅತ್ಯುತ್ತಮವಾದ ಹೇಳಿಕೆಯೊಂದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಟ್ಟ ಹೇಳಿಕೆಯೊಂದು ಜನರನ್ನು ಅಂತಹ ದೈಹಿಕಶ್ರಮದಿಂದ ಬಚಾವು ಮಾಡುತ್ತದೆ!

(೨೦೨) ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದಾಗ ಅದರಲ್ಲಡಗಿರುವ ಸಂತಸವನ್ನು ಹಣ ಮತ್ತು ಖ್ಯಾತಿ ತಡೆಹಿಡಿದುಬಿಡುತ್ತದೆ. ಆದ್ದರಿಂದ ನಿಜವಾದ ತೃಪ್ತಿಯೆಂಬುದು ಏನನ್ನೂ ಸಾಧಿಸಲಾಗದೆ ಸೋತಾಗಲೂ ಸಂತೃಪ್ತರಾಗಿರುವುದೇ ಆಗಿದೆ!

(೨೦೩) ಮೇಧಾವಿ ಅಥವ ಮೊರ್ಖನೊಬ್ಬನೊಂದಿಗೆ ವಾದಮಾಡಿದಲ್ಲಿ ಉಂಟಾಗುವ ಒಂದೇ ತೆರನಾದ ಪರಿಣಾಮವೆಂದರೆ ಇಬ್ಬರ ಎದಿರೂ ಮೊರ್ಖರೆನಿಸಿಕೊಂಡುಬಿಡುತ್ತೇವೆ!

(೨೦೪) ಸೊಗಸಾದ ಸೃಷ್ಟಿಯೆಂಬುದು ಸಂತೃಪ್ತ ಮನಃಸ್ಥಿತಿ. ಅಂತಹ ಸಂದರ್ಭಗಳಲ್ಲಿ ಒಂದು ಖಾಲಿ ಬಿಳಿಯ ಗೋಡೆಯಿದ್ದರೂ ನಡೆದೀತು!
(೨೦೫) ಕನ್ನಡಕ ಧರಿಸುವುದೆಂದರೆ ನಮ್ಮ ದೃಷ್ಟಿಗೆ ಧಕ್ಕಿಬರುವ ಸಲುವಾಗ ಜಗತ್ತನ್ನು ನಿದ್ರೆಯಿಂದ ಎಚ್ಚರಿಸಿದಂತೆ. ಆದ್ದರಿಂದಲೇ ನಾವು ಮಲಗಿರುವಾಗ ಕನ್ನಡಕ ಧರಿಸುವುದಿಲ್ಲ!