"ಸಂವೇದನ"ದ ಸೆಪ್ಟೆಂಬರ್ ತಿಂಗಳ ಕೊಡುಗೆ "ಮಳೆ ಹಬ್ಬ" ಇಂದು ೧೨ ಸೆಪ್ಟೆಂಬೆರ್ ೨೦೧೦ರಂದು Indian Institute of World Culture, ಬಸವನಗುಡಿ, ಬೆಂಗಳೂರಿನಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ಡಾ. ಜಿ. ಬಿ. ಹರೀಶ್ "ಕನ್ನಡ ಕಾವ್ಯ ಪ್ರಪಂಚದಲ್ಲಿ ಮಳೆಯ ಸಂಭ್ರಮ" ದ ಬಗ್ಗೆ ಅದ್ಬುತವಾಗಿ ಮಾತನಾಡಿದರು. ಪಂಪನಿಂದ ಹಿಡಿದು ನವ್ಯ ಕವಿಗಳಾದಂತ ಅಡಿಗರು, ನರಸಿಂಹಸ್ವಾಮಿಗಳ ವರೆಗು "ಮಳೆ ಸಂಭ್ರಮ" ದ ಬಗ್ಗೆ ವಿವಿಧ ಸ್ತರಗಳಲ್ಲಿ ಬಹಳ ಚೆನ್ನಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಒಂದು ರೂಪ - ರೇಖೆ ಯನ್ನು ಕಲ್ಪಿಸಿ ಕೂಟ್ಟರು. 


ಕಾರ್ಯಕ್ರಮದ ಏರಡನೆಯ ಭಾಗದಲ್ಲಿ ಉದಯೊನ್ಮುಖ ಹಿಂದುಸ್ತಾನಿ ಗಾಯಕರಾದಂತ ಓಂಕಾರನಾಥ ಹವಾಲ್ದಾರ್ "ಮಳೆ ರಾಗ" ವಾದ "ಮಿಯಾ ಕ ಮಲ್ಹಾರ್" ಅನ್ನು ತಮ್ಮ ಅಮೊಘ ಕಂಠಸಿರಿಯಲ್ಲಿ ಒಂದು ಘಂಟೆಗಳ ಕಾಲ ಸುವಿಸ್ತಾರವಾಗಿ ಹಾಡಿ ಮಳೆ, ಗುಡುಗು, ಸಿಡಿಲಿನ ವಾತವರಣವನ್ನೆ ಸ್ರುಷ್ಟಿ ಮಾಡಿದರು.