ಗಣೇಶ ಚತುರ್ಥಿಗೆ ಪಟಾಕಿ ತಂದಾಗೆಲ್ಲಾ ಒಂದಲ್ಲಾ ಒಂದು ಸಮಸ್ಯೆ ಇದ್ದದ್ದೇ. ಪಟಾಕಿ ಹೊಡೆಯುವಾಗಿನ ಗದ್ದಲ ಸಹಿಸದವರು,
ಕಸ ಕಡ್ಡಿ ಮನೆಯಂಗಳದಲ್ಲಿ ಎಂದು ಗೊಣಗುವವರು, ಪಟಾಕಿ ಹೊಡೆಯುವಾಗಿನ ಮಕ್ಕಳ ಮತ್ತು ಮನೆಯ ಸುರಕ್ಷತೆ ಇತ್ಯಾದಿ.
ತರದಿದ್ದರೆ ಮಕ್ಕಳಿಗೆ ಹಬ್ಬದ ದಿನ ಯಾವುದೇ ಮೋಜಿಲ್ಲದೇ ಹೊತ್ತು ಕಳೆಯುವುದೇ ಸಮಸ್ಯೆ. ಅದಕ್ಕೆ ಈ ಬಾರಿ ಹಬ್ಬಕ್ಕೆ
ಪಟಾಕಿ ಬದಲಾಗಿ ಗುಳ್ಳೆ ಮಾಡುವ ಗ್ಲೂ ತಂದಿದ್ದೆ.
ಹತ್ತು ರೂಪಾಯಿಗೆ 12 ಪುಟ್ಟ ಬಾಟೆಲ್ ಗಳು. ಇದರಿಂದ ಮಕ್ಕಳಷ್ಟೆ ಅಲ್ಲದೆ ದೊಡ್ಡವರೂ ಹೊತ್ತು ಕಳೆಯುತ್ತಿದ್ದ
ಕೆಲವು ಫೋಟೋ ಇಲ್ಲಿದೆ ನೋಡಿ. ಮಕ್ಕಳು ಪುಟ್ಟ ಪುಟ್ಟ ಗುಳ್ಳೆಗಳ ರಾಶಿ ಸೃಷ್ಟಿಸುತ್ತಿದ್ದರೆ, ಮಕ್ಕಳಿಗೆ ಅಪ್ಪ ಗುಳ್ಳೆ ಮಾಡುವುದನ್ನು ಕಲಿಸುತ್ತಿದ್ದಾರೆ. ಇನ್ನೊಬ್ಬರು ದೊಡ್ಡ ಗುಳ್ಳೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಎತ್ತರಕ್ಕೆ ಇನ್ನೂ ಎತ್ತರಕ್ಕೆ ಹೋಗುವುದನ್ನು ನೋಡಿದರೆ ಗುಳ್ಳೆಯಲ್ಲಿ ಕಾಣುವ ಸುತ್ತಲಿನ ಚಿತ್ರವನ್ನು ನೋಡಬಹುದು. ನಾನು ಫೋಟೋ ತೆಗೆದು ಹೊತ್ತು ಕಳೆದೆ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಸಂಭ್ರಮಿಸಿದರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪೇಟೆಗೆ ಬಂದ ಹಳ್ಳಿ ಹೈದನ ಬಾಳು
ನಮ್ಮೂರ ಪ್ರತಿಭೆಗೆ ಶುಭಾಶಯಗಳು
ಸಾತೋಡಿಗೊಂದು ಅನಿರೀಕ್ಷಿತ ಪ್ರವಾಸ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)