[ಈ ಸಾಲುಗಳು ವ್ಯಂಗ್ಯಚಿತ್ರವೊಂದರಿಂದ ಪ್ರೇರಿತ]
ಒಮ್ಮೊಮ್ಮೆ ನಮಗೆ ಅನಿಸುತ್ತದೆ, ಇದೆಂಥ ಅಸ್ತಿತ್ವ ನಮ್ಮಿಬ್ಬರದು?
ತಿಳಿಯದು ಎಂದು ಹುಟ್ಟಿದೆವು ನಾವು; ನಮಗೂ ಇದೆಯೇ ಸಾವು?
ಕೂಡಿ ಓಡಾಡುವೆವು ಅನುಕ್ಷಣ; ಆದರೇನು? ಒಮ್ಮೆಯೂ ಪ್ರೀತಿ ಮಾಡಲಾರೆವು,
ಬಣ್ಣದ ಬದುಕು ನಮ್ಮದು; ಕುಣಿಯುತ್ತಲಿರಬೇಕು ಸಿಗದಿದ್ದರೂ ಪ್ರಾಣವಾಯು.
ನಿಮ್ಮ ಮುಂದೆ ನಮ್ಮ ಗೋಳು ಹೇಳ್ಕೊಳೋದು ಸುಮ್ನೆ ಸಮಯ ಹಾಳು,
ಏಕೆಂದರೆ, ನಿಮಗೆ ಗೊತ್ತು ನಾವಿಬ್ಬರೂ ಬರೇ ಸ್ಕ್ರೀನ ಸೇವರಿನ ಮೀನುಗಳು!
ಪ್ರತಿಕ್ರಿಯೆ (2)