___LINK_OPEN_href="http://1.bp.blogspot.com/_Xahtxjj2WYE/TLiHZ6xv5tI/AAAAAAAAAw0/dtw5eoEKKNw/s1600/2cwrl7k.jpg"___
 

___LINK_OPEN_href="http://1.bp.blogspot.com/_Xahtxjj2WYE/TLiHZ6xv5tI/AAAAAAAAAw0/dtw5eoEKKNw/s1600/2cwrl7k.jpg"___ಬಾಳಿ ಬದುಕ ಬೇಕು ನಿನ್ನ ಒಲವಿನ ಬೆಳಕಿನಲ್ಲಿ.
ನೋವ ಮರೆಯಬೇಕು ನಿನ್ನ ವರ್ಣನೆಯ

ಕವಿತೆ ಸಾಲುಗಳಲ್ಲಿ. ಕಳೆದು ಹೋಗಬೇಕು
ನಿನ್ನ ಪ್ರೇಮದ ಮಡಿಲಲ್ಲಿ.

ಜೀವನದ ಜಾಡು ಹುಡುಕಿ ಹೊರಟಾಗ ನೀ
ಸಿಕ್ಕೆ ಒಲವ ಮರದಂತೆ. ಸಾಕೆಂದರೂ ಸೂಸುವೆ

ಪ್ರೀತಿಯ ನೆರಳ ಈ ಪ್ರೇಮಹೋಕನಿಗೆ.

ನಲ್ಮೆಯ ನಾಜೂಕಿನ ನನ್ನಾಕೆ ನೀ. ನಗಬಾರದೆ

ನನ್ನೊಮ್ಮೆ ನೋಡಿ. ನಾನಾಗುತ್ತಿದ್ದೇ ಆಗ ನಗುವಿ

ನಗಾರಿ.

ನಾ ಹೊರಟ ಆ ಕ್ಷಣ. ನಿನ್ನಲ್ಲಿತ್ತು ಅದೇನೋ ತಲ್ಲಣ.

ಹೇಳಬಾರದಿತ್ತೇ ಮರುಕ್ಷಣ. ನಾ ನಿನ್ನೊಂದಿಗ್ಗೇನೆ
ಸತ್ತು ಹೋಗುತ್ತಿದ್ದೇ ಅದೇ ದಿನ.

ಮರಳಿ ಬಂದಾಗ ನೀ ನಿರಲಿಲ್ಲ. ಇತ್ತಲ್ಲಿ ನೀ ಬಿಟ್ಟು

ಹೋದ ನಿನ್ನೊಲವಿನ ಮರ.....ನಮ್ಮೊಲವಿನ ಮರ....



- ರೇವನ್ ಪಿ.ಜೇವೂರ್