ನಮ್ಮ ರಾಜ್ಯದ ಹೆಸರಲ್ಲೇ ಇದೆ ನಾಟಕ 

ಚೆಡ್ಡಿ ರಾಜಕಾರಣಿಗಳು ಪಾಲಿಸುತಿಹರು 

ಅದನು ಚಾಚೂ ತಪ್ಪದೆ 

ಹೇಗಿದೆ ನೋಡಿ ಅವರ ಮರಕೋತಿಯಾಟ.

ರೈತರ ಎದೆಗೆ ಗುಂಡಿಟ್ಟು ಮಾಧ್ಯಮದ

ಮುಂದೆ ಮೊಸಳೆ ಕಣ್ಣೀರು ಸುರಿಸುವರು.

ಗಣಿಯ ಧೂಳನು ನಮ್ಮ ಕಣ್ಣಿಗೆರಚಿ

ರೆಸಾರ್ಟ್ ಗಳಲ್ಲಿ ತಮ್ಮ ಕೈ ತೊಳೆಯುವರು

ನೈಸು, ಪೀಸು ಮುಂತಾದ ಮಂತ್ರ

ಜಪಿಸುತ್ತ ಕಾಲಹರಣ ಮಾಡುವರು.

ಮೊನ್ನೆ ತಾನೇ ಹರಾಜಾಯಿತು

ನಮ್ಮ ಕನ್ನಡ ತಾಯಿಯ ಮಾನ

ಏನಿದ್ದರೂ ಇದು ನಮ್ಮ ರಾಜಕಾರಣಿಗಳ ಜಾಯಮಾನ!

ಇದ ನೋಡಿ ಛಿ ಥೂ ಎಂದರೂ ಜಮಾನ

ಬೇಸರವಿಲ್ಲ ಇವರಿಗೆ ಜನರ ಕಣ್ತಪ್ಪಿಸಿ

ಓಡಾಡಲು ಇದೆ ಹೆಲಿಕ್ಯಾಪ್ಟರು- ವಿಮಾನ.

ಯಾರೇ ಬಂದರೂ ಇದೇ ಹಳೆ ಕ್ಯಾತೆ ಪುರಾಣ

ಇದೆಲ್ಲ ಮರೆತು ಹೇಗೆ ಹೇಳಿ ರಾಜ್ಯೋತ್ಸವ ಆಚರಿಸೋಣ?

ಹೋಗಲಿ ಬಿಡಿ ಎಲ್ಲ ಒಂದಾಗಿ ಹಾಡೋಣ  

ಜಯ ಹೋ ಕರ್- ನಾಟಕ ಮಾತೆ.