ನಮ್ಮ ನಾಡಿನಲ್ಲಿ ನಾವು ಪರಕೀಯರು
ಸ್ವಾತಂತ್ರದ ಕನಸು ಹೊತ್ತ ಹೋರಾಟಗಾರರು
ನಮ್ಮ ನಾಡು
ನಮ್ಮ ಭಾಷೆ
ಸಾವಿರ ಸಾವಿರ ವರ್ಷಗಳ ಇತಿಹಾಸ
ನಮ್ಮ ಜನ
ನಮ್ಮ ಮನ
ಸಾವಿರ ಸಾವಿರ ಒಡಕಿನ ಪರಿಹಾಸ
ನಮ್ಮ ದೇಶ
ನಮ್ಮ ತಾಯಿ
ಕೋಟಿ ಕೋಟಿ ಮಕ್ಕಳಿದ್ದರೂ ಸೊರಗಿಹಳು
ನಮ್ಮ ಮತ
ನಮ್ಮ ಧರ್ಮ
ಸಾವಿರ ಸಾವಿರ ದಾರಿಗಳಾಗಿ ಹರಿದು ಹಂಚಿ ಹೋಗಿದೆ
ನಾವು ಒಂದು
ನಾವೆಲ್ಲಾ ಒಂದು
ಅಜ್ಞಾನದಿಂದ ವೈಮನಸ್ಸುಗಳು ಬೃಹದಾಕಾರವಾಗಿದೆ
ನಮ್ಮ ಮತ
ನಮ್ಮ ಜಾತಿ
ಜ್ಞಾತಿಯಿಲ್ಲದ ಸಂಕೀರ್ಣತೆಗಳು ಅನೂಚಿತವಾಗಿ ಮೆರೆದಿದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!