ಪ್ರಾರ್ಥನೆ


ಸದ್ವರ್ಥನೆ ಸತ್ಪ್ರಾರ್ಥನೆ
ಎರಡಿದ್ದರೆ ಸಾಕು ಎರಡಿದ್ದರೆ ಸಾಕು
ಇರಲೇ ಬೇಕು ಇವು ಇರಲೇ ಬೇಕು ||ಪ||


ನಡೆ ಎಂಬುದೆ ಬದುಕಿನ ಸಿರಿ
ಅದರೊಳಿತೇ ಶೋಭೆ
ಅದನುಳಿದರೆ ಧರಿಸಿದ ಗರಿ
ಉ
ಡುಪೊಡವೆಯು ಬರಿದೆ 
ನಡೆಯೊಳಿತೇ ಶೋಭೆ
ಉ
ಡುಪೊಡವೆಯು ಬರಿದೆ ||೧||


ಸದ್ವರ್ಥನೆ ಸತ್ಪ್ರಾರ್ಥನೆ
ಎರಡಿದ್ದರೆ ಸಾಕು ಎರಡಿದ್ದರೆ ಸಾಕು
ಇರಲೇ ಬೇಕು ಇವು ಇರಲೇ ಬೇಕು ||ಪ||



ನುಡಿಗಿಂತಲು ನಡೆಹಿರಿದು
ಸದ್ವರ್ಥನೆ ಬೇಕು
ನಡೆಶುದ್ಧರ ಪಡೆ ಬೆಳೆದರೆ
ಪರಿವ
ರ್ತನೆಯಕ್ಕು
ಸದ್ವರ್ಥನೆ ಬೇಕು
ಪರಿವರ್ತನೆಯಕ್ಕು ||೨||


ಸದ್ವರ್ಥನೆ ಸತ್ಪ್ರಾರ್ಥನೆ
ಎರಡಿದ್ದರೆ ಸಾಕು ಎರಡಿದ್ದರೆ ಸಾಕು
ಇರಲೇ ಬೇಕು ಇವು ಇರಲೇ ಬೇಕು ||ಪ||



ಪರಿವರ್ತನೆ ಬಯಸಿ ಜಗದ
ಸತ್ಪ್ರಾರ್ಥನೆ ಇರಲಿ
ಲಾ ಲಲ ಲಾ ಲಲ ಲಾ ಲಲ ಲಲಲ
ಪರಿವರ್ತನೆ ಬಯಸಿ ಜಗದ
ಸತ್ಪ್ರಾರ್ಥನೆ ಇರಲಿ
ಅರಿವ ಬೆಳೆಸಿ ಬೆಳಗುವಂಥ
ಸತ್ಪ್ರೇರಣೆ ಸಿಗಲಿ
ಸತ್ಪ್ರಾರ್ಥನೆ ಇರಲಿ
  ಸತ್ಪ್ರೇರಣೆ ಸಿಗಲಿ ||೩||


ಸದ್ವರ್ಥನೆ ಸತ್ಪ್ರಾರ್ಥನೆ
ಎರಡಿದ್ದರೆ ಸಾಕು ಎರಡಿದ್ದರೆ ಸಾಕು
ಇರಲೇ ಬೇಕು ಇವು ಇರಲೇ ಬೇಕು ||ಪ||




                                                                                   - ಸದಾನಂದ