ಏಸುಕ್ರಿಸ್ತ
ವಿಶ್ವ ಶ್ರೇಷ್ಠ ಗಾರುಡಿಗ ಮಮತೆಯೊಡಲ ಏಸು ಅವ
ಜಗದ ಅಧಿಕ ಜನರ ಮನೆಯ ಮನದ ದೈವವಾದವ ||ಪ||
ದಯೆಯ ಪ್ರೀತಿ ಅಂತರಾಳ ಕೋಪ ತೋರದಾತನು
ಆಸೆಗೊಂಡು ಎಲ್ಲರನ್ನೂ ಸೆಳೆದುಕೊಂಬನಾತನು
ಕರುಣೆ ನೋಟ ಕಣ್ಣ ತುಂಬಿ ಕಾಣುವಾತನಾಸರೆ
ಸೂರ್ಯ ತಾನು ಬೆಳಗಿದಾಗ ಅರಳಿದಂತೆ ತಾವರೆ ||೧||
ಗಗನ ಚುಂಬಿಯಾದ ಕೀರ್ತಿ ತ್ಯ್ಯಾಗ ಶೀಲ ಕ್ರಿಸ್ತಗೆ
ಶತ ಶತ ಶತಮಾನದಿಂದ ಕೊಟ್ಟುದಲ್ಲ ಈ ಧರೆ
ಎಂಥ ಮೋಡಿಗಾರನಯ್ಯಾ ಭೂಮಂಡಲ ವಿಕ್ರಮಿ
ಕೋಪವಿರದೆ ತಾಪಗೊಳದೆ ಗಳಿಕೆಯಾಯಿತೀಪರಿ ||೨||
ಎಲ್ಲಿ ಹುಡುಕಬೇಕು ಈಗ ನಿನ್ನ ಚರ್ಚಿನಲ್ಲೋ
ಇಲ್ಲ ಅಂಧಾಭಿಮಾನ ಪೂರ್ಣ ಚರ್ಚೆಯಲ್ಲೋ
ಸತ್ಪ್ರೀತಿಯ ಹೃದಯಾಳಕೆ ನೀನು ಸದಾಲಭ್ಯ
ಕರುಣಾಳುವೆ ನಿನ್ನನಲ್ಲಿ ಕಾಣುವವರಲಭ್ಯ ||೩||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)