ಉತ್ಸಾಹಗೀತೆ
ಗಗನ ಚುಕ್ಕಿಗಳಂತೆ ಮಿನುಗುತಿಹ ಕಂಗಳಲಿ
ಹೊಳೆ ಹೊಳೆದು ತೋರುತಿದೆ ಭಾರತರ ಕನಸು
ನಲಿವ ಭರ ಗರಿಬಿಚ್ಚಿ ಹಾರುತಿದೆ ಮನಸು ||೧||
ಅಡಿ ಮುಡಿಯ ತನಕ ಎಡೆಬಿಡದೆ ತುಂಬಿದೆ ಹಸಿವು
ಲೋಕ ಲೋಕವ ನುಂಗಿ ತೇಗಬೇಕೆಂದು
ಸಾಕೆನ್ನದೆಲ್ಲವನು ನೋಡಬೇಕೆಂದು ||೨||
ಹಾರು ಹಕ್ಕಿಗಳಲ್ಲಿ ಈಜು ಮೀನುಗಳಲ್ಲಿ
ಓಡುವುದು ಜಿಂಕೆಗಳ ಓಟದಲಿ ಮುಂದು
ಎದೆಗುಡಿಯ ತೋರಣಕೆ ಹಬ್ಬವೆಂದೆಂದು ||೩||
ಬಣ್ಣ ಬಣ್ಣದ ಜಾಲ ಸೃಷ್ಟಿ ವೈಭವದಲ್ಲಿ
ಇಷ್ಟಕೂ ಮಿಗಿಲಾದ ದೃಷ್ಟಿಯೇ ಮೂಲ
ಇಷ್ಟದೊಳು ದೃಷ್ಟಿಯನು ಇಟ್ಟವರ ನೋಡ ||೪||
ಭೇದವುನ್ನತಿಗಿಲ್ಲ ಬೆಳಕು ಕತ್ತಲೆಯಲ್ಲ
ಬಾಲತನದೊಳಗಿನಿತು ದೋಷವಿಲ್ಲ
ಸಾಧನೆಯ ಒಳಿತಿನಲಿ ಮೆರೆವುದೆಲ್ಲ ||೫||
ಕಣ್ಣಿನಲಿ ಸೂರ್ಯನೂ ಕೆನ್ನೆಯಲಿ ಚಂದ್ರನೂ
ಮೈ ಮನಗಳೊಳಗೆಲ್ಲ ಉತ್ಸಾಹ ತುಂಬಿ
ಹುರುಪುಳ್ಳ ಕಿರಿಯರಲಿ ಭರವಸೆಯ ನಂಬಿ ||೬||
( ಶಾಲಾ ಮಕ್ಕಳ ಆಟ ಪಾಠಗಳನ್ನು ನೋಡುತ್ತಾ ಬರೆದ ಕವನ )
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (4)