ದೃಶ್ಯ - ೬ ಮಾಧ್ಯಮದವರು ಕೆಲವರನ್ನು ಮಾತನಾಡಿಸುತ್ತಿದ್ದಾರೆ. ಅವರ ಹೇಳಿಕೆ ಹೀಗಿದೆ. ಅವರು ಹೀಗೆ ಮಾಡಿಕೊಳ್ಳುತ್ತಾರೆಂದು ನಾವು ಕನಸಲ್ಲೂ ನೆನೆಸಿರಲಿಲ್ಲ. ಅದೂ ಅಲ್ಲದೆ ಅವರ ಪ್ರೀತಿಗೆ ಅನುಮತಿ ಕೊಟ್ಟ ಮೇಲೂ ಏಕೆ ಹೀಗೆ ಮಾಡಿದರೋ ಎಂದು ಶೋಕಸಾಗರದಲ್ಲಿ ಮುಳುಗಿದರು. ಅವರು ಅಲ್ಲಿ ಸತ್ತು ಬಿದ್ದಿದ್ದ ರೂಪ ಳ ಅಪ್ಪ. ಇನ್ನೊಂದು ಬದಿಯಲ್ಲಿ ಸತ್ತು ಬಿದ್ದಿದ್ದ ಶ್ರೀಧರನ ಪಕ್ಕದಲ್ಲಿ ಅವರ ತಾಯಿ ಮುಗಿಲು ಮುಟ್ಟುವಂತೆ ರೋಧಿಸುತ್ತಿದ್ದರು. ಅದು ಯಶವಂತಪುರದ ರೈಲ್ವೆ ಗೇಟ್ ಬಳಿ ಸತ್ತು ಬಿದ್ದಿದ್ದ ಪ್ರೇಮಿಗಳ ಚಿತ್ರಣ. ಪಕ್ಕದಲ್ಲಿ ನಿಂತಿದ್ದ ಪೋಲಿಸ್ ಅಧಿಕಾರಿ ಮಾಧ್ಯಮದವರಿಗೆ ವಿವರಿಸುತ್ತಿದ್ದರು. ಶವದ ಬಳಿ ಒಂದು ಕಾಗದ ಸಿಕ್ಕಿದೆ ಅದರಲ್ಲಿ "ನಮ್ಮಿಬ್ಬರ ಸಾವಿಗೆ ನಮ್ಮ ನಮ್ಮ ಹಿರಿಯರೇ ಕಾರಣ. ನಮ್ಮ ಪ್ರೀತಿಗೆ ಅಂಗೀಕರಿಸದ ಅವರಿಗೆ ನಾವು ಕೊಡುತ್ತಿರುವ ಶಿಕ್ಷೆ ನಮ್ಮ ಸಾವು. ಅವರವರ ಸ್ವಾರ್ಥಕ್ಕೆ ನಮ್ಮ ಪ್ರೀತಿಯನ್ನು ಬಲಿ ಕೊಡಲು ನಾವು ಸಿದ್ಧರಿಲ್ಲ. ಜೀವನದಲ್ಲಿ ಒಟ್ಟಿಗಿರಲು ಸಾಧ್ಯವಿಲ್ಲ ಹಾಗಾಗಿ ಸಾವಿನಲ್ಲಿ ಒಂದಾಗಿದ್ದೇವೆ. ನಾವು ಯಾರಿಗೂ ಕ್ಷಮೆ ಕೇಳುವುದಿಲ್ಲ" ಎಂದು ಬರೆದಿತ್ತು. ಇತ್ತ ಪೊಲೀಸರು ಹಿರಿಯರ ಬಳಿ ವಿಚಾರಣೆ ಮುಂದುವರೆಸಿದ್ದರು. ಶ್ರೀಧರನ ಅಪ್ಪ ಹೇಳುತ್ತಿದ್ದರು. ಮೊದಲು ಅವರ ಪ್ರೀತಿಗೆ ನಾವು ನಿರಾಕರಿಸಿದ್ದು ನಿಜ, ಆದರೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ತಿಳಿದು ಅವರ ಪ್ರೀತಿಗೆ ಒಪ್ಪಿಗೆ