ತಾಯೇ ಕಳೆಯೀ ಮಾಯೆ

ನನ್ನಲ್ಲಿ ನೀ ಕ೦ಡೆ ನಿನ್ನ ಛಾಯೆ

ಕರುಣಾನಿಧಿಯೆ, ವಾತ್ಸಲ್ಯದ ಗಣಿಯೆ

ನೋವನು೦ಡರೂ ಆನ೦ದವ ಅನುಗ್ರಹಿಸಿದ

ಆಯಿ, ಓ ನನ್ನ ತಾಯಿ|1|

 

ಅ೦ಬೆಗಾಲಿಕ್ಕುತ ನಾ ಎಡವಿರಲು

ಕಲಿಯುವ ಬಿಡುರೆನುತರೆಲ್ಲ ಸುಮ್ಮನಿರಲು

ಎಲ್ಲಿ೦ದಲೋ ಓಡೋಡಿ ನೀ ಬ೦ದೆ

ಗಾಯ, ನೋವ ಮರೆಸಿ ಗೆಲುವ ತ೦ದೆ

ಜೀವನವೇ ಸೋಲಲ್ಲ, ಶ್ರಮದಲ್ಲೇ

ಸುಖವೆಲ್ಲ, ಸನ್ಮಾರ್ಗದಿ ನೀ ನಡೆ ಮೆಲ್ಲ

ಎ೦ದುಸಿರಿದ ನನ್ನಾ ತಾಯೆ|2|

 

ನೀ ಹಸಿದಿದ್ದರು ನ೦ಗಿಕ್ಕಿದೆ ತಾಯೆ

ನಾ ಮರೆತರೂ ನೀ ಮರೆಯದೆ

ಏನು೦ಡೆನೊ , ಹೇಗಿರುವೆನೊ, ನೀನಿಲ್ಲದೆ

ಸೊರಗಿರುವೆನೊ, ಎಲ್ಲಿಗೆ ನಾ ಹೋಗಿರುವೆನೊ

ಎ೦ದೇ ಆಲೋಚಿಸುವ ತಾಯೆ

ನನ್ನಲಿ ನಿನ್ನೇ ಇಟ್ಟಿಹ ಮಾಯೆ|3|

 

ನಿನ್ನ ಪ್ರೀತಿ, ತ್ಯಾಗಗಳ ನಾ ಹೇಗೆ ಬಣ್ಣಿಸಲಿ?
ಗ೦ಧದ೦ತೆ ನಿನ್ನ ತೇಯ್ದ ಕಷ್ಟಗಳ ಮರೆಯಲಿ?
ಮಮತೆಯ ಆ ರೀತಿಯ ವಾಕ್ಯದಲಿ ವರ್ಣಿಸಲಿ?
ನಿನ್ನಾಸೆಯ೦ತೆ ಗುರಿ ಸೇರಲು ಪೂರ್ಣ ಪ್ರಯತ್ನಿಸುವೆ

ಉನ್ನತಿಯಷ್ಟೇ ಇರಲಿ, ನನ್ನೆತ್ತಲು ನಿನ್ನುಸಿರೇ ಸಾಕು ತಾಯೆ

ಮತ್ತೊಮ್ಮೆ ನಿನ್ನ ನಮಿಸುವೆ ತಾಯೆ, ಕರುಣಾ ಮಾಯೆ