ಈ ಸುಂದರ ಸಂಜೆಯಲ್ಲಿ,
ನೆನಪುಗಳು ಮರುಕಳಿಸುತ್ತಿವೆ,
ಸುಂದರವಾದ ಬಾಲ್ಯದ ನೆನಪುಗಳು.
ಗೆಳೆಯ-ಗೆಳತಿಯರೊಂದಿಗೆ ನಲಿದಾಡಿದ
ಆ ಕ್ಷಣಗಳು...
ಆಕಾಶದ ಚಂದ್ರಮ-ಚುಕ್ಕಿಗಳಂತೆ,
ಗುರು-ಶಿಷ್ಯರಿಂದ
ತುಂಬಿ ತುಳುಕುವ ಆ ಕೋಣೆಗಳು.
ಹಾದಿ-ಕುಣಿದ, ಆಡಿದ,ಓಡಿದ,
ಆ ಮೈದಾನಗಳು.
ಮರಳಿ ಬರುವುದೇ ಆ ಸುಂದರವಾದ ಜೀವನ?
ಬರೀ ಸ್ಮರಣೆಯಲ್ಲೇ ಸಾಗುವುದು
ನಮ್ಮ ಮುಂದಿನ ಜೀವನ.
ಆಗಾಗ್ಗೆ ಬರುತಿರಲಿ ಈ ಸುಂದರ
ಸವಿನೆನಪುಗಳ ಪ್ರವಾಹ,
ತಿಳಿಯಾಗಲಿ ನನ್ನ ಮನದ
ದುಃಖ ದುಮ್ಮಾನದ ಕಲರವ
ರೇಣುಕಾ.ಬ.ಬಿರಾದಾರ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!