ಇನಿಯ
ನೀನಿದ್ದರೇನು ಸೊಗಸು ಸನಿಹ
ಇರದಿದ್ದರೆ ಅದುವೇ ವಿರಹ
ನಿನ್ನ ಸವಿಮಾತೆಲ್ಲ ಕಿವಿಗೆ ಇಂಪು
ಅದರಿಂದಲೇ ಹೃದಯಕ್ಕೆ ತಂಪು
ನೆಮಪುಗಳ ಮಾತು ಮಧುರ
ಅದರಿಂದಲೇ ಅವುಗಳು ಅಮರ
ಕನಸುಗಳೆಲ್ಲ ನೆನಪುಗಳ ಆಗರ
ಜೀವನವೇ ಕನಸುಗಳ ಸಾಗರ
ಮನಸ್ಸಿನ ದುಃಖ ಕೇಳುವವರಿಲ್ಲ
ಹೃದಯದ ಮಾತು ಬಲ್ಲವರಿಲ್ಲ
ಒಲುಮೆಯ ಸಿಹಿನುಡಿಗಳನ್ಹೆಳುವವರಿಲ್ಲ
ಬರೀ ಸ್ವಾರ್ಥ ತುಂಬಿದ ಮನುಜರಿವರೆಲ್ಲ
ಪ್ರತಿಕ್ರಿಯೆ (1)