ಚಳಿಗಾಲ ಮುಗಿಯಿತು ಅನ್ನುವ ಸೂಚನೆ ಕೊಡಲು ಮತ್ತೊಮ್ಮೆ ಬಂದಿತು ಶಿವರಾತ್ರಿ. ನಾಳೆ ಪೂರ್ತಿ ಬೆಂಗಳೂರಿನ ಮತ್ತು ಕರ್ನಾಟಕದ ಎಲ್ಲ ಶಿವ ದೇವಾಲಯಗಳಲ್ಲಿ ಜನಪೂರ. ಬೆಂಗಳೂರಿನ ಹಲವು ದೇವಾಲಯಗಳಲ್ಲಿ ನಾಳೆ ಒಂದು ದಿನ ಶಿವದರ್ಶನ ತ್ರಾಸದಾಯಕ. ಅಂದ ಹಾಗೆ ಎಲ್ಲರೂ ನಾಳಿನ ಕಾರ್ಯಕ್ರಮಗಳನ್ನು ನಿಗದಿಗೊಳಿಸಿಕೊಂಡಿದ್ದೀರ ?.
ನನ್ನ ಗೆಳೆಯ ಕೆಂಗೇರಿ ಚಕ್ರಪಾಣಿ ತಮ್ಮ ಒಂದು ಛಾಯಚಿತ್ರ ಪ್ರದರ್ಶನಕ್ಕೆ ನನಗೆ ಅಹ್ವಾನವಿತ್ತಿದ್ದಾರೆ. ಅವರ ಹತ್ತಿರವಿರುವ ಕರ್ನಾಟಕದ ನೂರಾರು ದೇವಾಲಯದ ಸಾವಿರಾರು ಚಿತ್ರದರ್ಶನ ಆನಂದದಾಯಕ. ನಾಳೆ ಶಿವರಾತ್ರಿ ಪ್ರಯುಕ್ತ ಶಿವದರ್ಶನ ಎಂಬ ಚಿತ್ರಪ್ರದರ್ಶನದಲ್ಲಿ ಕರ್ನಾಟಕದ ಶಿವದೇವಾಲಯಗಳು, ಲೀಲಾ ಮೂರ್ತಿಗಳು, ಪರಿವಾರ ದೇವತೆಗಳು , ಮುಖಶಿವಲಿಂಗ ಮುಂತಾದವುಗಳ ಛಾಯಚಿತ್ರಗಳ ಪ್ರದರ್ಶನ ವಿಜಯನಗರದ ಪೋಲಿಸ್‍ಸ್ಟೇಶನ್ ಹತ್ತಿರದ ಶ್ರೀಕೋದಂಡರಾಮ ಸ್ವಾಮಿ ದೇವಾಲಯದ ಆವರಣದಲ್ಲಿ ಬೆಳಗಿನಿಂದ ರಾತ್ರಿಪೂರ ಏರ್ಪಡಿಸಿದ್ದಾರೆ . ಹತ್ತಿರವಿರುವವರು ಸಮಾಯಾವಕಾಶವಿರುವವರು ಹಾಗು ಆಸಕ್ತರು ಬಂದು ವೀಕ್ಷಿಸಲು ಸ್ವಾಗತ