ತರಗತಿಯಲ್ಲಿ ಅವರು ಬದ್ಧ ವೈರಿಗಳು. ಒಬ್ಬನಿಗೆ ಅಂಗ್ಲ ಭಾಷೆ ಪ್ರಿಯವಾದರೆ, ಇನ್ನೋರ್ವನಿಗೆ ಕನ್ನಡ. ಒಬ್ಬನಿಗೆ ಸಮಾಜ ಇಷ್ಟವಾದರೆ ಇನ್ನೊಬ್ಬನಿಗೆ ಗಣಿತ. ತಿಂಗಳ ಕೊನೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಿದೆ, ಅವರಿಬ್ಬರೂ ಕ್ರಿಕೆಟ್ ನಲ್ಲಿ ಭಾರತದ ಪರ ಘೋಷಣೆ ಕೂಗುತ್ತಿದ್ದಾರೆ, ಇದೇ ಬೀದಿ ಕೊನೆಯ ಟಿವಿ ಅಂಗಡಿಯಲ್ಲಿ, ಪಂದ್ಯ ನೋಡುತ್ತಾ! 

ಚಿತ್ರ ಕೃಪೆ: http://chigoasonye.blogspot.com