ಸಮರ್ಪಿಸುವೆನು ನನ್ನೆಲ್ಲ 
ಸಾಧನೆಗಳನ್ನವರ ಪಾದಕ್ಕೆ,
ಜೀವಿಸುವೆನು ಅವರ
 ಸುಖ-ಸಂತೋಷಕ್ಕೆ,
ಅರ್ಪಿಸುವೆನು ನನ್ನ
ತನು-ಮನ ಧನವನ್ನವರಿಗೆ,
ಸವೆಸುವೆನು ನನ್ನ
ಜೀವನವನ್ನು ಅವರ ಸೇವೆಗೆ,
ಯಾರವರು? ಯಾರವರು?
ಅವರೇ ನನ್ನ ಹೆತ್ತವರು