ಸಾರ್ಥಕ ಬದುಕು

ನಾನಾಗಲಿಲ್ಲ ನನ್ನವಳೆಣಿಸಿದಂತೆ
ವಜ್ರ ವೈಡೂರ್ಯ ಖರೀದಿಯಲಿ

ನಾನಾಗಲಿಲ್ಲ ನನ್ನ ಮಕ್ಕಳೆಣಿಸಿದಂತೆ
ಅವರವರ ಮನಸ್ಸಿನ ಗೊಂದಲದಲಿ

ನಾನಾಗಲಿಲ್ಲ ನನ್ನ ಹಿರಿಯರೆಣಿಸಿದಂತೆ
ಜೇವನದ ಯಶೋಗಾಥೆಯಲಿ

ನನ್ನದದಾಗಲಿಲ್ಲ ನಾನೆಣಿಸಿದಂತೆ
ಸವೆಸಿದ ಬದುಕು ಜೀವನದಲಿ

ಕುಣಿಯುತಿರೆ ಕಾವ ದೈವ ಎಣಿಸಿದಂತೆ
ದಣಿವಾಗಲಿಲ್ಲ ಸಾರ್ಥಕ ಬದುಕಿನಲಿ