ಏತಕೀ ವಿಜ್ಞಾನ,

ಏತಕೀ ಸಂಶೋಧನೆಗಳ ದೊಂಬರಾಟ,

ಬದಲಿ ಹೃದಯಗಳ ಜೋಡಿಸಿ,

ಅಭಿನವ ಬ್ರಹ್ಮರೆಂದು ಮೆರೆಯುವ ವಿಜ್ಞಾನಿಗಳೇ,

ಕಿವುಡರೇ ನೀವು ? ಕುರುಡರೇ ನೀವು ?

ಕೇಳಿಸದೇ ನಿಮಗೆ ಕೋಟಿ ಕೋಟಿ ಜನರ ಆರ್ತನಾದ ?

ಕಾಣಿಸದೇ ಮಾರಣಹೋಮ ?

ಕಸಿದುಕೊಳ್ಳಲಾರಿರಾ ನೀವಿತ್ತ ಅಣ್ವಸ್ತ್ರಗಳ,

ಬಿಡಿಸಲಾರಿರಾ ಈ ಭೀಕರ ಯುದ್ಧಗಳ,

ಬನ್ನಿ ಇನ್ನಾದರೂ ನಿಮ್ಮ ವಿಜ್ಞಾನದಿಂದ

ಬೆಳಗಬನ್ನಿ ಮನುಕುಲದ ಉನ್ನತಿಯ

*****************

 

 

 

 

 

 

 

 

 

ಸಾಧನೆ