ಚಿಗುರು

ಕತ್ತರಿಸಿ ಬಿಸುಟರೇನು ಬುಡದವರೆಗೆ
ಮತ್ತೆ ಚಿಗುರುವೆ ನೀನು
ಚಿವುಟಿ ಒರೆದರೇನು ಕುಡಿಯ

ಮತ್ತೊಮ್ಮೆ  ತಲೆಯೆತ್ತುವೆ

ನೀ ಅಂಕುರದೇ
ಉರಿಸೆ ಅಗ್ನಿಯ ಕೂಡೆ
ನಾಶ ಹೊಂದದೆ
ಮರಳಿ ಜನ್ಮುವೆ
ಇದೇ ನೆಲದೆ
ಅರಳ ಬಯಸುವೆ
ಇದೇ ತಾನೇ
ಪ್ರಕ್ರತಿ ನಿಯಮ
ಮತ್ತೆ ಮತ್ತೆ
ಅಳಿಸಿದರೂ ನಾವು
ಅಳಿಯೆ ನೀ
ನಮ್ಮಲ್ಲಿಯೂ ಇದೇ
ಕೆಚ್ಚು 

ಒಲವು
ಇದ್ದಿದ್ದರೆ

ಎಷ್ಟು
ಚೆನ್ನಿತ್ತು
ನಮ್ಮತ್ತ
ಕನ್ನಡದತ್ತ