ಬದುಕಜಾತ್ರೆಯ ತುಂಬಾ
ಅದೆಷ್ಟುಮುಖಗಳು?
ಯಾವಮುಖವೂ
ಭರವಸೆಆಗದೆ
ಉಳಿದಿರುವಾಗ
ಊರಿಂದೂರಿಗೆ
ನೋವಿನಿಂದನೋವಿಗೆ
ಚಿಂತನೆಗಳೊಂದಿಗೆ
ಕನವರಿಕೆಗಳೊಂದಿಗೆ
ನೆನಪುಗಳೊಂದಿಗೆ
ಜೋಳಿಗೆಹಿಡಿದು
ಎದೆಯರಾಗಗಳಿಗೆ
ಕಾವ್ಯದಬಟ್ಟೆ
ತೊಡಿಸುತ್ತಇರುವಾಗ
ಜಗದಸಕಲರನ್ನೂ
ಪ್ರೀತಿಸುವ
ಎಲ್ಲಮತಗಳಲ್ಲೂ
ಇನ್ನೂಮನುಷ್ಯತ್ವ
ಹುಡುಕುತ್ತಿರುವಾಗ
ನನ್ನದೇಹಾದಿಯಲ್ಲಿ
ನಡೆಯುತ್ತಾಇರುವಾಗ
ಕೊನೆಗೊಮ್ಮೆಸಾವಿನ
ಮನೆಯಒಡಲಿಂದ
ಬಿಟ್ಟುಹೋದವರ
ನೆನಪಲ್ಲಿರುವಾಗ
ಇಲ್ಲಿರಲಾರೆಅಲ್ಲಿ
ಹೋಗಲಾರೆ
ಎಂಬಸಂದಿಗ್ಧದಲ್ಲಿರುವಾಗ
ಕೇಳದಯಾವುದೋ
ಮುರಳೀಗಾನಕ್ಕೆ
ಕಿವಿಯಾಗುವವರೆಗೆ
ಜಂಗಮನಾಗದೆ
ಉಳಿವಿಲ್ಲನನಗೆ.
ಪ್ರತಿಕ್ರಿಯೆ (5)