ಗುರುವೇ ಎಲ್ಲಿರುವೆ ನೀನು?
ಸಂಕಷ್ಟದಲಿ, ಇಕ್ಕಟ್ಟಿನಲಿ

ಉಸಿರುಗಟ್ಟಿಸೋ ಗುಂಪಿನಲಿ

ಕಾಲೆಳೆತದ, ತುಳಿತದ ಹೊತ್ತಿನಲಿ

ನಿನ್ನೇ ನೆನೆಯುವೆ ನಾನು|1|

ನಿನ್ನೇ ಮರೆತ ಪಾಪಿಯ ನಾ?
ಏರಿದ ಏಣಿಯ ಒದ್ದವನಾ?
ಹೆಸರೆಂಬ ಕೆಸರಿನಲಿ ಬಿದ್ದವನಾ?
ಹಸಿದವರ ನೋಡಿಯೂ ನಕ್ಕವನಾ?
ಜ್ನಾನವ ಹಂಚದೆ ಹೂತವನಾ ?|2|
ನಮಗಾಗಿ ನೀನೆಲ್ಲ ಮರೆತೆ

ಹಗಲಿರುಳು ಚಿಂತೆ ನಮ್ಕುರಿತೇ

ನಿನ್ನ ಶಿಷ್ಯರ್ಯಾರೆಂಬುದು ಚರಿತೆ

ಕೊನೆಗೇನೂ ಕೋರದೆ ಹೊರ‍ಟೆ|3|

ಇಂದು ನೀನಿಲ್ಲ ನಮ್ಮೊಡನೆ

ಕಷ್ಟ ಕಳೆದೊಡನೆ

ನೀನಿಷ್ಟವಾದೊಡನೆ

ಕೆಸರಿಂದೆತ್ತಿದ, ಹೆಸರನ್ನಿತ್ತಿಹ

ಓ ಸದ್ಗುರುವೇ,
ನಿನ್ನ ದಿನಾ ನೆನೆವೆ |4|