ಗುರು
ಗುರುವೆಂಬ ಹೆಸರಲ್ಲಡಗಿಹುದು ಮಹಾಶಕ್ತಿ,
ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರ 
ವೆಂಬುದು ಲೋಕೋಕ್ತಿ.
ಇಟ್ಟರೆ ಗುರುವಿನಲ್ಲಿ ಅಚಲ ಭಕ್ತಿ,
ಸಿಗುವುದು ಮನುಜಗೆ ಜೀವನ ಮುಕ್ತಿ.
 
ಆತ್ಮಾನಂದ
ದೇವರನ್ನು ನೆನೆಯುವುದೇ ಒಂದು ಆನಂದ
ಅದರಿಂದಲೇ ಸಿಗುವುದು ಆತ್ಮಾನಂದ
ದಿನವೂ ನೆನೆಯುತ್ತಿದ್ದರೆ ನಿತ್ಯಾನಂದ
ಇದನ್ನರಿತರೆ ಜಗವು ಸದಾನಂದ