ಕಿರಣಗಳಭಾರಕ್ಕೆ 

ಸೋತಸೂರ್ಯ 

ಪಡುವಣದಸಮುದ್ರದ 

ಎದೆಯಲ್ಲಿ 

ಪಿಸುಗುಡಲು

ಹವಣಿಸುತ್ತಇರುವಾಗ 

ಅಗೋತಿಂಗಳ 

ಆಗಮನ 

***************

ಅವಳಕಣ್ಣಆಳ 

ತಿಳಿಯದೆಈಜು 

ಬಾರದಅವನು 

ತನ್ನನ್ನೇಬಲಿಕೊಡುತ್ತಾನೆ.

***************

ಅವಳೆಂದರೆಅವನಿಗೆ 

ಸತ್ತುಹೋಗುವಷ್ಟುಇಷ್ಟ 

ಅದಕ್ಕೆಅವಳಎದುರು 

ಮಾತಾಡುವುದುಕಷ್ಟ.

*********************

ಮನದಿತುಂಬಿರೋ 

ಕಾವಳವನ್ನು 

ಕಸಗುಡಿಸೋಅವನು 

ಎಲೆಅಡಿಕೆಹಾಕಿಕೊಂಡು 

ಉಗಿಯುತ್ತಾನೆ. 

****************

ರಾತ್ರಿಕೊಂದ 

ಕನಸುಗಳು 

ಮುಂಜಾವಿನಲಿ 

ಮಂಜಾಗಿ 

ಜಗದ 

ತುಂಬಾ 

ಸವಾರಿ 

ಹೊರಡುತ್ತವೆ

**************

ಅವನಕಣ್ಣ

ಪಾಪೆಯಲ್ಲಿ 

ಸತ್ತುಬಿದ್ದ 

ನೆನಪುಗಳು 

ಕಂದು

ಓನುಗಳಾಗಿವೆ

*************

ಪ್ರತಿಸಾರಿಯೂ 

ಜಗವುಭಾವನೆಗೆ 

ಕಿವುಡಾದಾಗ

ಕವಿತೆಎದೆಯೊಳಗೆ 

ಗರ್ಭಧರಿಸುತ್ತದೆ. 

******************

ಜಗದಕಣ್ಣಿಗೆ 

ಮೌನಿಯಾದ  ಅವಳು 

ಆತ್ಮದಕನ್ನಡಿಯ 

ಮುಂದೆಸುಮ್ಮನೆ 

ಅಳುತ್ತಾಳೆ.