ಯುಗಾದಿ
ಯುಗಾದಿ ಬಂತು ಯುಗಾದಿ
ವರುಷ ವರುಷವು ತರಲಿ ಹರುಷ

ನಮ್ಮ ನಮ್ಮಲ್ಲಿ ಬೆಸುಗೆಯ ಭರವಸೆಯ
ತುಂಬಲಿ ಸಂವತ್ಸರವು ಬರುತ ಬರುತ

ಸ್ವರ್ಣವು ಕ್ಯೆಗೆಟುಕದಿದ್ದರೊ
ಸುವರ್ಣ ಯುಗವಾಗಲಿ,

ರಜತವು ರಂಜಿಸದಿದ್ದರು,
ರಜತೋತ್ಸವಗಳು ನಡೆಯುತಿರಲಿ,

ದವಸ ಧಾನ್ಯಗಳು ತುಂಬಿ ತುಳುಕಲಿ,
ಬರ ಕ್ಷಾಮ ಎಂದೂ ಸುಳಿಯದಿರಲಿ,

ಎಲ್ಲೆಲ್ಲೂ ಸುಭಿಕ್ಷವಾಗಿರಲಿ,
ಪ್ರಳಯದ ಭೀತಿ ದೊರವಾಗಲಿ,

ಬೇವಿನ ಕಹಿ ಮನದಲ್ಲಿ ನಿಲ್ಲದಿರಲಿ,
ಬೆಲ್ಲದ ಸವಿ ಮನೆ ಮನದಲ್ಲಿ ನೆಲೆಸಿರಲಿ,

ನಿಲ್ಲದಿರಲಿ ಮನೆಗಳಲ್ಲಿ ಸಂಭ್ರಮದ ಆಚರಣೆ
ನಿಲ್ಲಲ್ಲಿ ಪ್ರರಭಾಷೆ, ಪರದೇಶದ ಅನುಕರಣೆ

ತುಂಬಿರಲಿ ಮನದಲ್ಲಿ ಶ್ರೀಮಂತಿಕೆಯ ಹೊಂಗನಸು
ತರಲಿ ಶ್ರೀ ಖರ ನಾಮ ಸಂವತ್ಸರ ಅರೋಗ್ಯ ಭಾಗ್ಯ ಎಲ್ಲರಲಿ,

ಕಲೆತು, ಬೆರೆತಾಗ ವಾಕ್ಪತದಲ್ಲಿ,
ನಾವೆಲ್ಲ ಆಗುವೆವು ಸು ಸಂಪದರು.

      - ಮದ್ವೇಶ್