ಕಲೆಯುದು ಒಲಿಯಲು ನಲಿಯಲು
ಕಾಲದ ಸಾಲು ಸಾಲುಗಳೆ ಬೇಕು

ಒಲಿದ ಕಲೆಯದು ಸುಳಿಯ
ಸೆಲೆಯಾಗಲು ಮನದಿ ಛಲವಿರಬೇಕು

ಕಲಿತ ಕಲೆಯದು ಹರಿಯಲು
ಉಲಿದುಲಿದು ಬಿಡದೆ ಮೊಗೆಯಬೇಕು

ಕಲಿತ ಕಲೆಯಲಿ ಅಹಮಿಕೆಯು
ನಲಿದುಳಿದರೆ ಹೊಗೆಯುಗುಳುವ ಒಲೆಯದು
ಕಾಂತ ಒಲೆಯಹುದು ಕಾಂತ