ನಮ್ಮಲಿ ತಕ್ಕಮಟ್ಟಿಗೆ ನದಿಗಳಿವೆ. ಇದ್ರಿಂದ ನೀರಿಗೆ ಅಷ್ಟು ತತ್ವಾರವಿಲ್ಲ. ಆದರೆ ಮರುಭೂಮಿಯಲ್ಲಿನ ಜನ ನೀರಿಗೆ ಎಂಥ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಗೊತ್ತಾ? ಬೇಕಿದ್ರೆ ನಮ್ಮಗಳಿಗೆ ಕುಡಿಯುವ ನೀರನ್ನು ಸಾಲ ಕೊಡ್ತಾರೆ. ಅಷ್ಟು ಜವಾಬ್ದಾರಿಯಿಂದ  ನೀರಿನ ಸದ್ಭಳಕೆಯನ್ನು ಮಾಡಿಕೊಳ್ತಾರೆ.

ಜೈಸಲ್ಮೇರ್ ಮರುಭೂಮಿಯ ಒಂದು ಭಾಗ.  ಈ ನಗರ ಸುಮಾರು 800 ವರ್ಷಗಳ ಹಿಂದೆ ಈ ನಗರ ರೂಪಿತವಾಗಿತ್ತು.

ಇಲ್ಲಿ ಮಳೆ ಬೀಳೋದು ವರ್ಷಕ್ಕೆ ಕೇವಲ 16 ಮಿ ಮೀ. ಆದ್ರೂ ಇಲ್ಲಿ ನೀರಿಗೆ ಯಾವುದೇ ಬರ ಇಲ್ಲ ಅಂದ್ರೆ ನಂಬೋಕೆ ಆಗಲ್ಲ. ಯಾಕಂದ್ರೆ ಇಲ್ಲಿ ಪ್ರತಿಯೊಂದು ಮನೆಯ ಮೇಲೆ ಮಳೆಯ ನೀರನ್ನ ಸಂಗ್ರಹಿಸ್ತಾರೆ. ಈ ಒಂದು ಮಾದರಿ ಆಗಿನ ಜನ ತಾಂತ್ರಿಕತೆಯ ಜೊತೆಗೆ ಸೌಂದಯರ್ೋಪಾಸನೆ ಹೊಂದಿರುವುದನ್ನ ತಿಳಿಸುತ್ತದೆ. ಇದು ಜಸೇರಿ. ಮರುಭೂಮಿಯಲ್ಲೂ ಈ ಜಸೇರಿ ಎಂದಿಗೂ ಬತ್ತಿಲ್ಲ. ಇದ್ನ 150 ವರ್ಷಗಳ ಹಿಂದೆ ಮಾಡಿದಾರೆ. ಇಲ್ಲಿ ಅತಿ ಕಡಿಮೆ ಮಳೆ ಬೀಳುತ್ತೆ ಆದ್ರೂ ಈ ಜಾಗ್ದಲ್ಲಿ ನೀರನ್ನ ಗಳಿಸಿ, ಉಳಿಸಿ, ಬಳಸ್ತಾರೆ ಬೇಕಾದ್ರೆ ಹೆಚ್ಚಿನ ನೀರಿನ ಮೂಲಗಳನ್ನ ಹೊಂದಿ, ಅಭಾವದಲ್ಲಿರೋರ್ಗೆ ಬೇಕಿದ್ರು ನೀರನ್ನ ಸಾಲ ಕೊಡ್ತಾರೆ. ಇದು ಈ ಜನರು ನೀರಿನ ಬಗ್ಗೆ ಹೊಂದಿರುವ ಅರಿವು ಮತ್ತು ಶ್ರದ್ಧೆಯನ್ನ ತೋರಿಸುತ್ತೆ. ಇಂಥ ಅದ್ಭುತ ಜಲಾರವನ್ನ ಕಟ್ಟಿದ ಇಂಜಿನಿಯರ್ ಯಾರು ಗೊತ್ತೆ? ಇಲ್ಲಿದ್ದಾರೆ. ಇಲ್ಲಿನ ಕಷ್ಟಜೀವಿಗಳು..... ಒಂದು ಸಂಘಟನೆಯ ಗೆಲುವು. ಈ ಎಲ್ಲಾ ಪದ್ದತಿಗಳನ್ನ ನೋಡಿದಾಗ ಇಲ್ಲಿನ ಜನರ ಕಟ್ಟುನಿಟ್ಟಿನ ಆಚರಣೆ ನೀರಿನ ಮೌಲ್ಯವನ್ನ ತಿಳಿಸುತ್ತದೆ.

ಹೀಗೆ ನೀರನ್ನ ಸಂಗ್ರಹಿಸೋದೇ ಅಲ್ದೆ 52 ಸುಂದ್ರವಾದ ನೀರಿನ ಮೂಲಗಳನ್ನ ಮಾಡಿದ್ದಾರೆ, ಇದನ್ನ ಖಾಸಗಿ ಸಹಭಾಗಿತ್ವದಲ್ಲಿ ಸಕಾರಗಳು ಮಾಡಿದ್ದಾರೆ.ನೀರು ಕಡ್ಮೆಯಾಗ್ಲಿ, ಹೆಚ್ಚಾಗ್ಲಿ ಈ ನೀರಿನ ಮೂಲಗಳ ಸೌಂದರ್ಯ ಮಾತ್ರ ಕಡಿಮೆಯಾಗೋಲ್ಲ.

ವಿಶೇಷ ಅಂದ್ರೆ ಈ ಎಲ್ಲಾ ಕೆಲಸಗಳಗೇನ್ನೂ ಸಕರ್ಾರ ಆಗ್ಲಿ, ಸಂಘ-ಸಂಸ್ಥೆಗಳಾಗ್ಲಿ ಸಹಾಯ ಮಾಡ್ತೀಲ್ಲ ಇಲ್ಲಿನ ಜನ್ರೆ ಇದನ್ನ ಮಾಡ್ತೀದ್ದಾರೆ.

ಈ ಜಾಗ್ದಲ್ಲಿನ ನೀರಿನ ಮೂಲಗಳ ಬಳಿಗೆ ಹೋದ್ರೆ ಈ ಕಂಬಗಳನ್ನ ಹಾಕಿರ್ತಾರೆ. ಈ ಕಂಬಗಳು ನೀರನ್ನ ಹಾಳುಮಾಡ್ಬೇಡ, ಇಲ್ಲಿ ಶುದ್ಧಜಲವನ್ನ ಸಂಗ್ರಹಿಸಲಾಗುತ್ತೆ ಅಂತ ತಿಳಿಸುತ್ವೆ.

ಇನ್ನೂ ಇಲ್ಲಿ ವಿಶಿಷ್ಟ ಶೈಲಿ ಶಿಲ್ಪಕಲೆಯಂತೆ ಕಾಣ್ತೀರೋ ಇದನ್ನ ಜಲಾರಗಳು ಅಂತ ಕರೀತಾರೆ. ಈ ಥರದ ಜಲರಾಗಳನ್ನ ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಕಾಣ್ಬಹುದು. ಇದನ್ನ 11 ಶತಮಾನದಲ್ಲಿ ಕಟ್ಟಿದ್ರು. ಜೋಥಪುರ್ ಒಂದೇ ನಗರದಲ್ಲಿ ಇಂಥ 8 ಜಲಾರಗಳನ್ನ ಕಾಣ್ಬಹುದು.

ಈ ಜನ ಕಮ್ಮಿ ಮಳೆಯನ್ನೇ ಉಳಿಸಿಕೊಂಡು, ಬಳಸಿಕೊಳ್ಳುತಿರುವ ಪರಿ, ಒಂದು ಶ್ರದ್ಧೆಯ ತಪಸ್ಸು.

ಈ ಜನ ಭೂಮಿಯ ನೆಲದಲ್ಲಿನೂ ಸಹ ಇಂತ ಸರಳ ಪದ್ದತಿಗಳನ್ನ ಬಳಸೋ ಮೂಲಕ ಇತರೆ ರಾಜ್ಯದ ಜನ್ರಿಗೆ ಮಾದರಿಯಾಗಿದ್ದಾರೆ. ಇಂಥ ಶುದ್ಧ ನೀರಿನ ತಾಣಗಳನ್ನು ಅಂಥ ಮರುಭೂಮಿಯಲ್ಲೂ ಕಾಪಾಡಿರುವಾಗ ನಮ್ಮಗೇನು ದಾಡಿ?.