ರಸ ಪ್ರಶ್ನೆಗಳು   ೧.

೧.     ವಿನಾಯಕಾ ಟ್ರಾನ್ಸ್ಪೋರ್ಟ್ ಕನ್ನಡದಲ್ಲಿ ಬರೆದಿದ್ದರೂ ಇದು ತಮಿಳ್ನಾಡಿನದ್ದು ಎಂತ ಹೇಗೆ ಕಂಡು ಹಿಡಿಯಬಹುದು?

೨.     ಉದ್ದ ಸೇತುವೆಯ ಕಂಭಗಳಮೇಲೆ ಅವುಗಳ ನಂಬರ್ ಬರೆದಿದೆ, ಪೂರ್ವದಿಂದ ಹೊರಟಾಗ ೨೬ ಎಂದು ಬರೆದ ಕಂಭ ವಾಪಾಸ್ಸು ಬರುವಾಗ ಅದೇ ಕಂಭದ ಮೇಲೆ ಎಷ್ಟು ಬರೆದಿರುತ್ತದೆ?( ವಿ ಸೂ ಒಟ್ಟು ೫೬ ಕಂಭಗಳಿವೆ.)


೩.     ಮೊಟ್ಟೆಯನ್ನು ೧೦ ಮೀ ಎತ್ತರದಿಂದ ಕಲ್ಲಿನ ಮೇಲೆ ಬೀಳಿಸಿದರೆ ಅದು ಒಡೆಯುತ್ತಾ? ( ವಿ ಸೂ :  ಹಸೀ ಮೊಟ್ಟೆ)


೪.    ಬೆಂಗಳೂರಿನಲ್ಲಿ ಎಡಗಡೆಯಿಂದ ಬರುವ ಮತ್ತು ಬಲಗಡೆಯಿಂದ ಹೋಗುವ ವಾಹನಗಳ ರಸ್ತೆ ಎಲ್ಲಿದೆ?


೫     ಒಂದು ಓಟದ ಸ್ಪರ್ದೆಯಲ್ಲಿ ಎರಡನೆಯವನಾಗಿ ಓಡುತ್ತಿರುವನನ್ನು ಹಿಂದೆ ಹಾಕಿದರೂ ಆತ ಮೊದಲನೆಯವನಾಗಲಿಲ್ಲ ಯಾಕೆ?

 

 

 

 

೧.   ಹೌದು ವಿನಾಯಗಾ ಅಂತಾ ಬರೆದಿರುತ್ತಾರೆ 
೨.   ನಂಬರ್ ಒಂದೇ ಕಡೆಯಿಂದ ಶುರು ಮಾಡಿರುತ್ತಾರೆ 
೩.   ಹೌದು ಮೊಟ್ಟೆ ಒಡೆಯುತ್ತದೆ ಕಲ್ಲಾದರೆ ಸಾಧ್ಯವಿಲ್ಲ 
೪. ಮೆಜೆಸ್ಟಿಕ್ ಬಳಿ 
೫.ಎರಡನೆಯವನನ್ನು ಹಿಂದಿಕ್ಕಿ ಎರಡನೆಯವಾಗೆ ಉಳಿದ 

 
ಉತ್ತರಿಸಿದ ಜಯಂತ್ , ಹರ್ಷ,ಹರ್ಷ,  ರಾಮ ಮೋಹನ್ ಮತ್ತು ಪಾರ್ಥರಿಗೆ ನನ್ನ ನಮನ